ADVERTISEMENT

ಗಾಂಧಿಬಜಾರ್‌ನಲ್ಲಿ ಮರಗಳ ಬೇರಿಗೆ ರಾಸಾಯನಿಕ: ದೂರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 2:40 IST
Last Updated 9 ಜನವರಿ 2023, 2:40 IST
ಗಾಂಧಿ ಬಜಾರ್‌
ಗಾಂಧಿ ಬಜಾರ್‌    

ಬೆಂಗಳೂರು: ಗಾಂಧಿಬಜಾರ್‌ ಮುಖ್ಯರಸ್ತೆಯ ಅಭಿವೃದ್ಧಿಗಾಗಿ ಸುಮಾರು 80 ವರ್ಷಗಳಷ್ಟು ಹಳೆಯ ಬೃಹತ್‌ ಮರಗಳ ಬೇರು ಕತ್ತರಿಸಿ, ಅದರ ಕೆಳಗೆ ರಾಸಾಯನಿಕ ಹಾಕಿ ಬಂಡೆ ಸ್ಫೋಟಿಸಲಾಗಿದೆ ಎಂದು ನೈಜ ಹೋರಾಟಗಾರ ವೇದಿಕೆಯ ಸಾಮಾಜಿಕ ಹೋರಾಟಗಾರ ಎಚ್‌.ಎಂ. ವೆಂಕಟೇಶ್‌ ದೂರಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರು, ಲೋಕಾಯುಕ್ತರು ಹಾಗೂ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವೆಂಕಟೇಶ್ ಪತ್ರ ಬರೆದು, ಈ ಮರಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಗಾಂಧಿಬಜಾರ್‌ ಮುಖ್ಯರಸ್ತೆಯ ಅಭಿವೃದ್ಧಿಯಲ್ಲಿ ಮರದ ಕೆಳಗೆ ಪೈಪ್‌ಗಳನ್ನು ಅಳವಡಿಸುವ ಉದ್ದೇಶದಿಂದ ಬೇರುಗಳನ್ನು ಕತ್ತರಿಸಲಾಗಿದೆ. ಬಂಡೆ ಇದೆ ಎಂದು ರಾಸಾಯನಿಕ ಬಳಸಿ ಸ್ಫೋಟ ಮಾಡಲಾಗಿದೆ. ಇದರಿಂದ ಮರಗಳು ಸಾಯುತ್ತಿವೆ. 80 ವರ್ಷಕ್ಕೂ ಹೆಚ್ಚಿನ ಬೃಹತ್‌ ಮರಗಳು ನೆಲಕ್ಕುರುಳುವ ಸಂಭವವಿದೆ ಎಂದು ಹೇಳಿದ್ದಾರೆ.

ADVERTISEMENT

ಗಾಂಧಿಬಜಾರ್‌ ಮುಖ್ಯರಸ್ತೆಯಲ್ಲಿರುವ ಈ ಮರಗಳು ಈ ಭಾಗದ ಸೌಂದರ್ಯವನ್ನು ಹೆಚ್ಚಿಸಿವೆ. ಇವುಗಳ ಮಾರಣ ಹೋಮಕ್ಕೆ ಕಾರಣರಾದ ಎಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.