ಬೆಂಗಳೂರು: ಹಸಿ ಮೆಣಸಿನಕಾಯಿ ದರ ಒಂದು ತಿಂಗಳಿನಿಂದ ನಿರಂತರವಾಗಿ ಏರಿದ್ದು, ಪ್ರತಿ ಕೆ.ಜಿ ದರ ₹100ಕ್ಕಿಂತ ಜಾಸ್ತಿಯೇ ಇದೆ. ಮಾರುಕಟ್ಟೆಗಳಿಗೆ ಆವಕ ತಗ್ಗಿರುವುದರಿಂದ ಯುಗಾದಿ ವೇಳೆಗೆ ದರ ಮತ್ತಷ್ಟು ಏರಲಿದೆ.
ರಾಜ್ಯದಲ್ಲಿ ಬೆಳೆಯಲಾಗಿದ್ದಮೆಣಸಿನಕಾಯಿ ಬೆಳೆ ಕಳೆದ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಭಾರಿಹಾನಿಗೆ ತುತ್ತಾಗಿತ್ತು. ಇದರಿಂದ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಮೆಣಸಿನಕಾಯಿಗೆ ಕೊರತೆ ಉಂಟಾಯಿತು.
ಮಳೆ ತಗ್ಗಿದ ನಂತರ ಮತ್ತೆ ಬೆಳೆದಿರುವ ಮೆಣಸಿನಕಾಯಿ ಮಾರುಕಟ್ಟೆಗೆ ಬರುವುದು ತಡವಾಗಿರುವುದಿಂದ ಅವಕ ಪ್ರಮಾಣಈಗಲೂ ಕಡಿಮೆ ಇದೆ. ಇದರಿಂದ ತಿಂಗಳಿನಿಂದ ಬೆಲೆಯೂ ನಿರಂತರವಾಗಿ ಹೆಚ್ಚಳ ಕಂಡಿದೆ. ಸದ್ಯ ಕೆ.ಜಿ.ಗೆ ₹120ರಿಂದ ₹140ರವರೆಗೆ ಸೋಮವಾರ ಮಾರಾಟವಾಗಿದೆ.
ಕಳೆದ ತಿಂಗಳಲ್ಲಿ ಕೆ.ಜಿ.ಗೆ ₹40ರಿಂದ ₹50ರಂತೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ,ಶಿವರಾತ್ರಿ ವೇಳೆಗೆ ಕೆ.ಜಿಗೆ ₹80ರಂತೆ ಮಾರಾಟವಾಯಿತು. ಬಳಿ ಕವೂ ದರ ಹೆಚ್ಚುತ್ತಲೇ ಇದ್ದು,ಸೋಮವಾರ ಸಗಟು ದರ ₹100, ಹಾಪ್‌ಕಾಮ್ಸ್ ದರ ₹130 ಹಾಗೂ ಚಿಲ್ಲರೆ ದರ ₹140 ಇದೆ.
ನಿಂಬೆಯೂ ತುಟ್ಟಿ: ‘ಯುಗಾದಿ ವೇಳೆಗೆ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ನಿಂಬೆ ಹಣ್ಣಿನ ದರವೂ ತುಸು ಏರಿದ್ದು, ಪ್ರತಿ ನಿಂಬೆ ₹8ರಿಂದ ₹10ರವರೆಗೆ ಮಾರಾಟವಾಗುತ್ತಿದೆ. ಸಾಮಾನ್ಯ ತರಕಾರಿ ದರಗಳೆಲ್ಲ ಕಡಿಮೆಯೇ ಇದೆ. ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.