ಬೆಂಗಳೂರು: ಕ್ರಿಸ್‌ಮಸ್ ಸಾಲು-ಸಾಲು ರಜೆ ಇರುವುದರಿಂದ ಹೊರ ಊರುಗಳತ್ತ ಹೊರಟಿದ್ದ ಜನ ಶುಕ್ರವಾರ ರಾತ್ರಿ ನೂಕು ನುಗ್ಗಲು ನಲ್ಲಿ ಬಸ್ ಹತ್ತಿ ಪ್ರಯಾಣಿಸಿದರು.
ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಗಳಿಗಾಗಿ ಜನ ಪರದಾಡಿದರು.
ಹೊರ ಊರುಗಳಿಗೆ ತೆರಳಲು ಮುಂಗಡ ಟಿಕೆಟ್ ಕಾಯ್ದಿರಿಸದೆ ನೇರವಾಗಿ ಬಸ್ ಹತ್ತಲು ಬಂದವರು ಪರದಾಡಬೇಕಾಯಿತು. ಸ್ಯಾಟಲೈಟ್ ನಿಲ್ದಾಣದಲ್ಲಿ ಮೈಸೂರು ಕಡೆಗೆ ಬಸ್ ಗಳಿಲ್ಲದೆ ರೋಸಿಹೋದ ಜನ ನಿಲ್ದಾಣದ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದ, ಜಗಳಕ್ಕೂ ಇದು ಕಾರಣವಾಯಿತು.
ಬರುವ ಒಂದೆರಡು ಬಸ್ ಗಳನ್ನು ಮುಗಿಬಿದ್ದು ಹತ್ತಿದರು. ರಜೆ ಸಂದರ್ಭದಲ್ಲಿ ಜನ ಊರುಗಳತ್ತ ಪ್ರಯಾಣ ಬೆಳೆಸುವುದು ಗೊತ್ತಿದ್ದರೂ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಒಮ್ಮೆಲೆ ಅನಿರೀಕ್ಷಿತವಾಗಿ ಜನ ಬಂದಿದ್ದರಿಂದ ತೊಂದರೆ ಉಂಟಾಯಿತು. ಕೂಡಲೇ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳುಹಿಸಲಾಯಿತು' ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.