ಬೆಂಗಳೂರು: 2018ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರ್ದೇಶಕಿ ಸುಮನಾ ಕಿತ್ತೂರು ನಿರಾಕರಿಸಿದ್ದಾರೆ. ಇದರಿಂದಾಗಿ ಸಮಿತಿಯು ಶೀಘ್ರವೇ ಕೆಲಸ ಆರಂಭಿಸುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.
ಸುಮನಾ ಕಿತ್ತೂರು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆದೇಶ ಹೊರಡಿಸಿತ್ತು. ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ನಿರ್ದೇಶಕ ಲೆಸ್ಲಿ ಕರ್ವಾಲೋ, ಲೇಖಕ ವಿ.ಲಕ್ಷ್ಮೀಪತಿ, ವಸ್ತ್ರಾಲಂಕಾರ ತಜ್ಞ ಚಿನ್ಮಯ್, ಛಾಯಾಗ್ರಾಹಕ ಬಿ.ಎಲ್. ಬಾಬು, ಸಂಕಲನಕಾರ ಎಸ್. ಶಿವಕುಮಾರಸ್ವಾಮಿ ಮತ್ತು ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಈ ಸಮಿತಿಯ ಸದಸ್ಯರು ಎಂದು ಆದೇಶದಲ್ಲಿ ಹೇಳಲಾಗಿದೆ.
ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರ ಕುರಿತು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಸುಮನಾ ಅವರು, ‘ಕೆಲವು ವೈಯಕ್ತಿಕ ಕೆಲಸಗಳ ಒತ್ತಡದಿಂದಾಗಿ ಈ ಜವಾಬ್ದಾರಿ ನಿಭಾಯಿಸಲು ಆಗದು ಎಂಬುದನ್ನು ನಾನು ಮೊದಲೇ ತಿಳಿಸಿದ್ದೆ. ಹೀಗಿದ್ದರೂ, ನನ್ನನ್ನು ಅಧ್ಯಕ್ಷೆ ಎಂದು ಪ್ರಕಟಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.