ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಬ್ರಾಂಡ್‌ಗಳ ಹೆಸರಿನಲ್ಲಿ ಕಳಪೆ ಬಟ್ಟೆ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ಕಾರ್ಯಾಚರಣೆ ಮುಂದುರಿಸಿದ್ದು, ಶುಕ್ರವಾರವೂ ₹2 ಕೋಟಿ ಮೊತ್ತದ ಕಳಪೆ ಗುಣಮಟ್ಟದ ಬಟ್ಟೆ ಜಪ್ತಿ ಮಾಡಿಕೊಂಡಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿ ಸಮೀಪ ಕಾರ್ಯಾಚರಣೆ ನಡೆಸಲಾಗಿದೆ.
ಯುನೈಟೆಡ್ ಆ್ಯಂಡ್ ಯುನೈಟೆಡ್ ಓವರ್ಸಿಸ್ ಟ್ರೇಡ್ ಮಾರ್ಕ್ ಕಂಪನಿಯ ವಿವಿಧ ಬ್ರಾಂಡ್‌ನ ಬಟ್ಟೆಗಳನ್ನು ಪಟೇಲ್ ಎಕ್ಸ್‌ಪೋರ್ಟ್ ಹಾಗೂ ಆರ್ಬಿ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕಳಪೆ ಗುಣಮಟ್ಟದಲ್ಲಿ ತಯಾರಿಸಿ ಮಾರಾಟ ನಡೆಸುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿವಿಧ ಬ್ರಾಂಡ್‌ಗಳ 1,607 ಹಾಗೂ 4,478 ಶರ್ಟ್‌ಗಳು, ವಿವಿಧ ಲೇಬಲ್‌ಗಳು, ಹೊಲಿಗೆ ಯಂತ್ರ ಜಪ್ತಿ ಮಾಡಿಕೊಳ್ಳಲಾಗಿದೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಪಟೇಲ್ ಎಕ್ಸ್‌ಪರ್ಟ್ ಹಾಗೂ ಆರ್.ಬಿ.ಫ್ಯಾಷನ್ ಗೋದಾಮಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಪೊಲೀಸರು, ₹1.50 ಕೋಟಿ ಮೌಲ್ಯದ ಕಳಪೆ ಬಟ್ಟೆ ವಶಕ್ಕೆ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.