ಬೆಂಗಳೂರು:ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಾಟಾ ಸೆಂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಿಂಕ್ರೊನಾಟ್ ಸಂಸ್ಥೆಯು ವರ್ಚುವಲ್ ಸಿಸ್ಟಂ ಆನ್ ಚಿಪ್ (ವಿಎಸ್‌ಒಸಿ) ತಂತ್ರಾಂಶ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
‘ಈ ತಂತ್ರಾಂಶವು ಕ್ಲೌಡ್ ಕಂಪ್ಯೂಟಿಂಗ್, ಎಡ್ಜ್ ಕಂಪ್ಯೂಟಿಂಗ್, ಡಾಟಾ ಸೆಂಟರ್ ಮತ್ತು ಐಒಟಿಗಳ ಗ್ರಹಿಕೆ ಹಾಗೂ ಅನುಷ್ಠಾನಗಳಲ್ಲಿ ಮಹತ್ವದ ಬದಲಾವಣೆ ತರುವ ನಿರೀಕ್ಷೆ ಇದೆ. ಕೂಲಿಂಗ್ ಮತ್ತು ಸಾಫ್ಟ್‌ವೇರ್ ಲೈಸೆನ್ಸಿಂಗ್‌ಗಳ ವೆಚ್ಚವನ್ನು ಶೇ 30 ರಿಂದ 50 ರಷ್ಟು ಕಡಿಮೆ ಮಾಡಬಹುದೆಂದು ಅಂದಾಜಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.