ADVERTISEMENT

ಶ್ರಮ, ಸಾಧನೆಯಿಂದ ಕೀರ್ತಿ: ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 19:42 IST
Last Updated 9 ಜುಲೈ 2018, 19:42 IST
ಸೌಂದರ್ಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ 'ರಜತ ಸೌಂದರ್ಯ-2018'ದಲ್ಲಿ ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ದಂಪತಿ, ಸಂಸ್ಥೆಯ ಸಂಸ್ಥಾಪಕ  ಪಿ.ಮಂಜಪ್ಪ ಇದ್ದರು
ಸೌಂದರ್ಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ 'ರಜತ ಸೌಂದರ್ಯ-2018'ದಲ್ಲಿ ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ದಂಪತಿ, ಸಂಸ್ಥೆಯ ಸಂಸ್ಥಾಪಕ ಪಿ.ಮಂಜಪ್ಪ ಇದ್ದರು   

ಬೆಂಗಳೂರು: 'ಪ್ರಪಂಚದ ಶೇ 90ಕ್ಕಿಂತ ಹೆಚ್ಚು ವಿಜ್ಞಾನಿಗಳು ಮೂಲತಃ ಬಡತನದಿಂದ ಬಂದವರೇ ಆಗಿದ್ದಾರೆ. ಶ್ರದ್ಧೆ, ಶ್ರಮ, ಸಾಧನೆ ಈ ಮೂರನ್ನು ರೂಡಿಸಿಕೊಂಡರೆ ಪ್ರಪಂಚದಲ್ಲೇ ಹೆಚ್ಚು ಜನಪ್ರಿಯ ವ್ಯಕ್ತಿಯಾಗಬಹುದು' ಎಂದು ಭಾರತರತ್ನ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರುಅಭಿಪ್ರಾಯಪಟ್ಟರು.

ಪೀಣ್ಯದಾಸರಹಳ್ಳಿ ಸಮೀಪ ಹಾವನೂರು ಬಡಾವಣೆಯ ಸೌಂದರ್ಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ 'ರಜತ ಸೌಂದರ್ಯ-2018'ನ್ನು ಉದ್ಘಾಟಿಸಿ ಸೋಮವಾರ ಅವರುಮಾತನಾಡಿದರು.

'ಭಾರತಕ್ಕೆ ಮ್ಯಾನೇಜ್‌ಮೆಂಟ್ ಪದವೀಧರರಿಗಿಂತ ಚೀನಾ, ಕೊರಿಯಾ, ಜಪಾನ್ ದೇಶಗಳಲ್ಲಿರುವ ಶ್ರಮಜೀವಿಗಳು ಬೇಕು. ಹಾಗೆಯೇ ಮಕ್ಕಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ, ಅರಿವು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.