ADVERTISEMENT

ನಿರ್ವಾಹಕ ವೃತ್ತಿಯ ಅವಮಾನ ಸರಿಯಲ್ಲ: ಎಚ್.ಕುಸುಮಾ

​ಪ್ರಜಾವಾಣಿ ವಾರ್ತೆ
Published 5 ಮೇ 2023, 22:49 IST
Last Updated 5 ಮೇ 2023, 22:49 IST
ಲಗ್ಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮತಯಾಚನೆ ಮಾಡಿದರು.
ಲಗ್ಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮತಯಾಚನೆ ಮಾಡಿದರು.   

ರಾಜರಾಜೇಶ್ವರಿನಗರ: ‘ನಿರ್ವಾಹಕರು ಎಂದರೆ ಸ್ವಾಭಿಮಾನ, ದುಡಿಮೆಯಿಂದ ಬೆವರು ಸುರಿಸಿ, ನೆಮ್ಮದಿಯ ಜೀವನ ಸಾಗಿಸುವ ಕಾರ್ಮಿಕವರ್ಗ. ನನ್ನ ತಂದೆಯ ಬಗ್ಗೆ ಹೀನಾಯವಾಗಿ ಮಾತನಾಡಿ ಒಬ್ಬ ಕಂಡಕ್ಟರ್ ಎಂದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಸ್ವಾಭಿಮಾನಿ ಮತದಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕುಸುಮಾ ಹೇಳಿದರು.

ಮೋಹನ್‍ಕುಮಾರ್, ಅಕ್ಕಯಪ್ಪ ಗಾರ್ಡ್‍ನ, ಯಶವಂತಪುರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿ ಮುನಿರತ್ನ ಅವರಂತೆ ನಕಲಿ ವೋಟರ್ ಐಡಿ ಮಾಡಿಸಿಲ್ಲ. ನಕಲಿ ಬಿಲ್ಲು ತಯಾರಿಸಿ ಕೆಲಸ ಮಾಡದೆ ಕೋಟಿ ಕೋಟಿ ಹಣ ಲೂಟಿ ಮಾಡಿರುವ ಬಗ್ಗೆ ಲೋಕಾಯುಕ್ತ ಸಾಬೀತು ಮಾಡಿದೆ. ಸ್ವಾಭಿಮಾನಿ ಜೆಡಿಎಸ್, ಮೂಲ ಬಿಜೆಪಿಗರು ಕ್ಷೇತ್ರದ ನೆಮ್ಮದಿ, ಶಾಂತಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಎಲ್.ಆರ್.ಎಸ್. ರಾಜೇಶ್, ಜೆಪಿ ವಾರ್ಡ್ ಅಧ್ಯಕ್ಷ ಆಕಾಶ್‍ಮಣಿ ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.