ADVERTISEMENT

ಜೋಪಡಿ ನೆಲಸಮ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 22:45 IST
Last Updated 23 ಜನವರಿ 2020, 22:45 IST
ಜೋಪಡಿ ಕಳೆದುಕೊಂಡ ಕಾರ್ಮಿಕರ ದಾಖಲೆಗಳನ್ನು ದಿನೇಶ್‌ ಗುಂಡೂರಾವ್‌ ಪರಿಶೀಲಿಸಿದರು. ಶಾಸಕ ರಾಮಲಿಂಗಾ ರೆಡ್ಡಿ ಇದ್ದಾರೆ
ಜೋಪಡಿ ಕಳೆದುಕೊಂಡ ಕಾರ್ಮಿಕರ ದಾಖಲೆಗಳನ್ನು ದಿನೇಶ್‌ ಗುಂಡೂರಾವ್‌ ಪರಿಶೀಲಿಸಿದರು. ಶಾಸಕ ರಾಮಲಿಂಗಾ ರೆಡ್ಡಿ ಇದ್ದಾರೆ   

ಬೆಂಗಳೂರು: ಅನಧಿಕೃತವಾಗಿ ಕಾರ್ಮಿಕರ ಜೋಪಡಿಗಳನ್ನು ನೆಲಸಮ ಮಾಡಿದ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಗುರುವಾರ ಭೇಟಿ ನೀಡಿದರು.

ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಮಂತ್ರಿ ಇಸ್ಪನ್ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಹೊಂದಿಕೊಂಡಿ
ರುವ ಖಾಲಿ ಜಾಗದಲ್ಲಿ 300ಕ್ಕೂ ಹೆಚ್ಚು ಜೋಪಡಿಗಳು ಇದ್ದವು. ಏಕಾಏಕಿ 80ಕ್ಕೂ ಹೆಚ್ಚು ಜೋಪಡಿಗಳನ್ನು ಕೆಡವಲಾಗಿದ್ದು, ಅಲ್ಲಿ ವಾಸವಿದ್ದ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ನೂರಾರು ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ.

ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅಳಲು ಆಲಿಸಿದ ಕಾಂಗ್ರೆಸ್ ಮುಖಂಡರು, ಅನಧಿಕೃತವಾಗಿ ಜೋಪಡಿ ಕೆಡವಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಬಾಂಗ್ಲಾ ವಲಸಿಗರೆಂಬ ಪಟ್ಟ ಕಟ್ಟಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರ ಜೋಪಡಿಗಳನ್ನು ನೆಲಸಮ ಮಾಡಿರುವ ಅಧಿಕಾರಿಗಳ‌ ವರ್ತನೆ ಅಮಾನವೀಯ. ಕಾರ್ಮಿಕರಿಗೆ ತೊಂದರೆ ನೀಡಿರುವ ತಪ್ಪಿತಸ್ಥರ ವಿರುದ್ಧ ಮುಖ್ಯಮಂತ್ರಿಯವರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಭೇಟಿ ವೇಳೆ ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ ರಿಜ್ವಾನ್ ಅರ್ಷದ್ ಅವರೂ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.