ADVERTISEMENT

ಪಶ್ಚಿಮ ಘಟ್ಟ ರಕ್ಷಣೆಗೆ ಜನರನ್ನು ಪ್ರೇರೇಪಿಸಬೇಕು: ವಿಜ್ಞಾನ ಲೇಖಕ ನಾಗೇಶ ಹೆಗಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:44 IST
Last Updated 1 ಸೆಪ್ಟೆಂಬರ್ 2024, 15:44 IST
<div class="paragraphs"><p>ನಾಗೇಶ ಹೆಗಡೆ</p></div>

ನಾಗೇಶ ಹೆಗಡೆ

   

ಬೆಂಗಳೂರು: ‘ಪಶ್ಚಿಮ ಘಟ್ಟಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಅಸಂಖ್ಯಾತ ಜೀವಸಂಕುಲಕ್ಕೆ ಆಪತ್ತು ಬಂದೊದಗಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗೆ ಹೋರಾಡಲು ನಾಡಿನ ಜನತೆಯನ್ನು ಪ್ರೇರೇಪಿಸಬೇಕು’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಸಲಹೆ ನೀಡಿದರು.

ಆಲ್‌ ಇಂಡಿಯಾ ಸ್ಟೂಡೆಂಟ್ ಆರ್ಗನೈಸೇಷನ್‌(ಎಐಡಿವೈಒ) ರಾಜ್ಯ ಸಮಿತಿ ‘ಬಿಕ್ಕಟ್ಟಿನ ಘಟ್ಟದಲ್ಲಿ ಪಶ್ಚಿಮ ಘಟ್ಟ’ ವಿಷಯ ಕುರಿತು ಆಯೋಜಿಸಿದ್ದ ಆನ್‌ಲೈನ್‌ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ADVERTISEMENT

‘ನಾವು ಬಹಳ ಹಿಂದಿನಿಂದಲೂ ಪಶ್ಚಿಮ ಘಟ್ಟದ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದವು. ಆದರೆ, ಈಗ ಭೂಮಿಯೇ ಮಾತನಾಡಲು ಪ್ರಾರಂಭಿಸಿದೆ. ಇತ್ತೀಚೆಗೆ ಶಿರೂರು, ವಯನಾಡ್, ಶಿರಾಡಿಗಳಲ್ಲಿ ಧಾರಾಕಾರ ಮಳೆಯಿಂದ ಸಂಭವಿಸಿದ ಅನಾಹುತಗಳು ಭೂಮಿಯೇ ತನ್ನ ಒಡಲ ಆಕ್ರೋಶವನ್ನು ಹೊರಹಾಕುತ್ತಿದೆಯೇನೊ ಎಂಬಂತೆ ಘಟಿಸಿವೆ’ ಎಂದು ಅವರು ಹೇಳಿದರು.

‘ಅಭಿವೃದ್ಧಿಯ ಹೆಸರಲ್ಲಿ, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ತ್ರಿಕೂಟದಲ್ಲಿ ಸಿಲುಕಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಲು ಪ್ರೊ.ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘‍ಪ್ರಜ್ಞಾವಂತ, ಪರಿಸರ ಕಾಳಜಿಯುಳ್ಳ ಪ್ರತಿಯೊಬ್ಬರೂ ಒಬ್ಬ ಉತ್ತಮ, ಪರಿಣಾಮಕಾರಿ ಸಂವಹನಕಾರರಾಗಿ ನಾಡಿನ ಜನತೆಗೆ ಪಶ್ಚಿಮ ಘಟ್ಟಗಳ ರಕ್ಷಣೆಯ ಮಹತ್ವವನ್ನು ತಿಳಿಸಬೇಕು’ ಎಂದು ಸಲಹೆ ನೀಡಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.