ADVERTISEMENT

ವಕೀಲರಿಗೆ ಸಂವಿಧಾನವೇ ಮೌಲ್ಯ: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

ರಾಷ್ಟ್ರೀಯ ಕಾನೂನು ಶಾಲೆ ವಿವಿ ಘಟಿಕೋತ್ಸವದಲ್ಲಿ ನ್ಯಾ.ಡಿ.ವೈ. ಚಂದ್ರಚೂಡ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 15:58 IST
Last Updated 22 ಸೆಪ್ಟೆಂಬರ್ 2024, 15:58 IST
<div class="paragraphs"><p>ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ಜೆಎಸ್‌ಡಬ್ಲ್ಯು ಅಕಾಡೆಮಿಕ್‌ ಬ್ಲಾಕ್‌ ಮತ್ತು ಜೆಎಸ್‌ಡಬ್ಲ್ಯು ಸೆಂಟರ್‌ಗೆ&nbsp;ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಶಂಕುಸ್ಥಾಪನೆ ನೆರವೇರಿಸಿದರು. ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಅಧ್ಯಕ್ಷೆ ಸಂಗೀತಾ ಜಿಂದಾಲ್,&nbsp; ಭಾಗವಹಿಸಿದ್ದರು. </p></div>

ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ಜೆಎಸ್‌ಡಬ್ಲ್ಯು ಅಕಾಡೆಮಿಕ್‌ ಬ್ಲಾಕ್‌ ಮತ್ತು ಜೆಎಸ್‌ಡಬ್ಲ್ಯು ಸೆಂಟರ್‌ಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಶಂಕುಸ್ಥಾಪನೆ ನೆರವೇರಿಸಿದರು. ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಅಧ್ಯಕ್ಷೆ ಸಂಗೀತಾ ಜಿಂದಾಲ್,  ಭಾಗವಹಿಸಿದ್ದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂವಿಧಾನವು ಪ್ರತಿಪಾದಿಸುವ ಅಂಶಗಳೇ ವಕೀಲರಿಗೆ ಮೌಲ್ಯಗಳು’ ಎಂದು ಸುಪ್ರೀಂ ಕೋರ್ಟ್‌ನ  ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿಶ್ವವಿದ್ಯಾಲಯದ ಕುಲಾಧಿಪತಿ ಡಿ.ವೈ. ಚಂದ್ರಚೂಡ್ ಇಲ್ಲಿ ಅಭಿಪ್ರಾಯಪಟ್ಟರು.

ADVERTISEMENT

ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾನವೀಯತೆ ಹೊಂದಿರುವ, ಒಳಧ್ವನಿಗೆ ಕಿವಿಯಾಗುವ ವಕೀಲರು ಯಶಸ್ವಿಯಾಗುತ್ತಾರೆ’ ಎಂದು ಪ್ರತಿಪಾದಿಸಿದರು.

‘ಕಾನೂನು ಪದವಿ ಪಡೆದು ವಿಶ್ವವಿದ್ಯಾಲಯದಲ್ಲಿ ಹೊರ ಹೋದ ಬಳಿಕ ನಿಮ್ಮ ಸಂಪರ್ಕಕ್ಕೆ ವೈವಿಧ್ಯಮಯ ಜನರು ಬರಲಿದ್ದಾರೆ. ಜನರ ನೋವುಗಳಿಗೆ ಧ್ವನಿಯಾಗಬೇಕು. ಅವರ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಕಾನೂನುಗಳನ್ನು ಗೌರವಿಸಿ ನ್ಯಾಯ ಒದಗಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ವೃತ್ತಿ ಜೀವನದ ಆರಂಭದಲ್ಲಿ ಪ್ರತಿ ಘಟನೆಯೂ ಜೀವನ್ಮರಣದ ಪ್ರಶ್ನೆಯಾಗಬಹುದು. ಆಗ ಅಭದ್ರತೆ, ಒಂಟಿತನ, ಅಸಾಮರ್ಥ್ಯದ ಭಾವ ಕಾಡಬಹುದು. ಜುಗುಪ್ಸೆಗೆ ಒಳಗಾಗಬಹುದು. ಯಾರೂ ಒಂಟಿ ಎಂದು ಭಾವಿಸದೇ ಸಂಕಷ್ಟಗಳನ್ನು ಎದುರಿಸಲು ಬಲಿಷ್ಠ ಬೆಂಬಲ ಜಾಲವನ್ನು ಕಟ್ಟಿಕೊಳ್ಳಬೇಕು. ಉತ್ತಮ ಮತ್ತು ನಿಕಟ ಸ್ನೇಹಿತರನ್ನು ಹೊಂದುವುದರ ಜೊತೆಗೆ ಕುಟುಂಬದ ಸದಸ್ಯರೊಂದಿಗೆ ನೋವು ಹಂಚಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ, ಘನತೆ, ಸ್ವಾಯತ್ತೆಯಂತಹ‌ ಶಾಶ್ವತ ಮೌಲ್ಯಗಳ ರಕ್ಷಣೆಗೆ ನಿಲ್ಲಬೇಕು. ವೃತ್ತಿ ಜೀವನದಲ್ಲಿ ಸ್ವಂತಿಕೆ, ವೈಯಕ್ತಿಕ ಅನುಭವ, ಮೌಲ್ಯಗಳು ಮುಖ್ಯ ಎಂದು ಪ್ರತಿಪಾದಿಸಿದರು.

ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಮಾತನಾಡಿ, ‘ವಕೀಲರಿಗೆ ಆಧುನಿಕ ತಂತ್ರಜ್ಞಾನದ ಅರಿವು ಇರಬೇಕು. ಸಮಾಜದಲ್ಲಿ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತ್ಯಂತರದ ಅರಿವೂ ಇರಬೇಕು. ಮಾನವೀಯತೆ ಮತ್ತು ದೂರದೃಷ್ಟಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಕುಲಪತಿ ಸುಧೀರ್‌ಕೃಷ್ಣ, ಬಾರ್ ಕೌನ್ಸಿಲ್‌ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ 7 ಚಿನ್ನದ ಪದಕ ಕಡೆದ ಸೌಮ್ಯಾ  ಸಿಂಗ್‌. 6 ಚಿನ್ನದ ಪದಕ ಪಡೆದ ಅನ್‌ಮೋಲ್ ಕೊಹ್ಲಿ 8 ಚಿನ್ನದ ಪದಕ ಪಡೆದ ಅಧಿತಿ ವಿಶ್ವಾಸ್‌ ಶೇಠ್‌ 5 ಚಿನ್ನದ ಪದಕ ಪಡೆದ ಅನುರಾಗ್‌ ತಿವಾರಿ 4 ಚಿನ್ನದ ಪದಕ ಪಡೆದ ಅಡಿನ್‌ ಕಾಶಿಸ್‌ ಗುಪ್ತ –ಪ್ರಜಾವಾಣಿ ಚಿತ್ರ

ಪದವಿ ಪ್ರದಾನ

ಒಟ್ಟು 1079 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎರಡು ಪಿಎಚ್.ಡಿ 52 ಸ್ನಾತಕೋತ್ತರ ಸಾರ್ವಜನಿಕ ನೀತಿ ಕಾರ್ಯಕ್ರಮಗಳು 90 ಸ್ನಾತಕೋತ್ತರ ಕಾನೂನು ಕಾರ್ಯಕ್ರಮ 85 ಕಲಾ ಮತ್ತು ಕಾನೂನು (ಆನರ್ಸ್) ಮತ್ತು 850 ಆನ್‌ಲೈನ್ ಮತ್ತು ಹೈಬ್ರಿಡ್ ಶಿಕ್ಷಣ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.