ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಅಂತರರಾಷ್ಟ್ರಿಯ ಲಿಂಗಾಯತ ಯುವ ವೇದಿಕೆಯ (ಐಎಲ್‌ಐಎಫ್) ನೂತನ ಅಧ್ಯಕ್ಷ ಚಿನ್ಮಯ ಚಿಗಟೇರಿ ತಿಳಿಸಿದರು.
ಅವರು ನಗರದಲ್ಲಿ ಭಾನುವಾರ ವೇದಿಕೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
‘ಐಎಲ್‌ವೈಎಫ್ ಎನ್ನುವುದು ಲಿಂಗಾಯತ ಉದ್ಯಮಿಗಳಿಗಾಗಿ ಮೀಸಲಾಗಿರುವ ವ್ಯಾಪಾರ ಜಾಲ. ಇದರ ಅಧ್ಯಕ್ಷನಾಗಿ ಪ್ರಮುಖ ಮೂರು ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದೇನೆ. ಉದ್ಯಮಿಗಳಿಗಾಗಿ ‘ಫಂಡಿಂಗ್ ಡೆಸ್ಕ್’ ರಚಿಸುವುದು, ಉದ್ಯಮಿಗಳಿಗೆ ನೆರವು ನೀಡಲು ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಸ್ಥಾಪಿಸುವುದು ಮತ್ತು ನಮ್ಮ ಚಟುವಟಿಕೆಗಳನ್ನು ಇಲ್ಲಿಯವರೆಗೆ ನಮ್ಮ ಉದ್ದಿಮೆಗಳೇ ಇಲ್ಲದ ದೇಶಗಳಿಗೆ ವಿಸ್ತರಿಸುವುದು’ ಎಂದು ವಿವರಿಸಿದರು.
ಐಎಲ್‌ವೈಎಫ್ 2012ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಹಲವು ದೇಶಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಸುಮಾರು ₹ 5,000 ಕೋಟಿ ಸಾಮೂಹಿಕ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.