ADVERTISEMENT

ಕೆಎಸ್‌ಆರ್‌ಪಿ: ಅಧಿಕಾರಿಗಳ ಮೇಲೆ ಲಂಚದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 1:30 IST
Last Updated 25 ಜುಲೈ 2023, 1:30 IST
ತಿನಿಧಿಕ ಚಿತ್ರ
ತಿನಿಧಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ರಜೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಹಿರಿಯ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಎಡಿಜಿಪಿಗೆ ಸಿಬ್ಬಂದಿಯೊಬ್ಬರು ದೂರು ನೀಡಿದ್ದಾರೆ. ಆ ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೂಡ್ಲುನಲ್ಲಿರುವ 9ನೇ ಕೆಎಸ್‌ಆರ್‌ಪಿ ತುಕಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿ. ಓಂಕಾರಪ್ಪ ಅವರು ಐದು ಮಂದಿ ಮೇಲಾಧಿಕಾರಿಗಳ ವಿರುದ್ಧ 11 ಅಂಶಗಳನ್ನು ಉಲ್ಲೇಖಿಸಿ, ಕೆಎಸ್‌ಆರ್‌ಪಿ ಎಡಿಜಿಪಿಗೆ ದೂರು ಸಲ್ಲಿಸಿದ್ದಾರೆ.

ಕೆಎಸ್‌ಆರ್‌ಪಿಯ ಕೆಲವು ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಂದಲೇ ಲಂಚ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

‘ಹೆಚ್ಚಿನ ರಜೆ ಬೇಕಾದಲ್ಲಿ ಹಣ ನೀಡಬೇಕು. ರಜೆಯಲ್ಲಿದ್ದರೆ ಪ್ರತಿ ದಿನಕ್ಕೆ ₹ 500ರಂತೆ ಹಣ ನೀಡಬೇಕು, ಹಣದ ಜತೆಗೆ ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಳ್ಳುತ್ತಾರೆ. ಹಣ ಕೊಡದಿದ್ದರೆ ಪರೇಡ್ ಮಾಡಿಸಿ ಕಿರುಕುಳ ನೀಡುತ್ತಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಣ ಪಡೆದು ಕೆಲವು ಸಿಬ್ಬಂದಿಗೆ ಊರಿನಲ್ಲಿರಲು ಅವಕಾಶ ನೀಡಿದ್ದಾರೆ ಎಂದು ಓಂಕಾರಪ್ಪ ನಾಲ್ಕು ಪುಟಗಳ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.