ADVERTISEMENT

ಟಾರ್ಪಲ್‌ ವಿತರಣೆಯಲ್ಲಿ ಅಕ್ರಮ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 18:37 IST
Last Updated 22 ಡಿಸೆಂಬರ್ 2021, 18:37 IST

ಬೆಂಗಳೂರು: ಕೃಷಿ ಇಲಾಖೆಯಿಂದ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್‌ಕೆವಿವೈ) ರೈತರಿಗೆ ಟಾರ್ಪಲ್ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಬೇಕು’ ಎಂದು ಹಾವೇರಿ ಜಿಲ್ಲೆಯ ರೈತಪ್ರಭುಗೌಡ.ಶಿ.ಸೊರಟೂರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು,‘ರೈತರಿಗೆ 2020–21ನೇ ಸಾಲಿನಲ್ಲಿ ಟಾರ್ಪಲ್‌ ವಿತರಣೆಯಲ್ಲಿ ಅಕ್ರಮ ನಡೆದಿದೆ. ಸರ್ಕಾರ ಹೇಳಿದ ಮಾನದಂಡದಂತೆ ‌ಮೂರು ಪದರವುಳ್ಳ 12 ಕೆ.ಜಿ ತೂಕದ ಟಾರ್ಪಲ್‌ ವಿತರಿಸಬೇಕು. ಆದರೆ, ಇಲಾಖೆ ವಿತರಿಸಿರುವ ಟಾರ್ಪಲ್‌ ನಿಗದಿತ ತೂಕಕ್ಕಿಂತ 1.8 ಕೆ.ಜಿ ಕಡಿಮೆ ಇದ್ದು, ಮೂರು ಪದರಗಳನ್ನೇ ಹೊಂದಿಲ್ಲ’ ಎಂದು ದೂರಿದರು.

‘ಕೃಷಿ ಸಚಿವ ಬಿ.ಸಿ.‍ಪಾಟೀಲ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲುಭ್ರಷ್ಠಾಚಾರ ನಿಗ್ರಹ ದಳಕ್ಕೆ ಮನವಿ ಸಲ್ಲಿಸುತ್ತಿದ್ದೇನೆ. ತನಿಖೆ ನಡೆಸದಿದ್ದರೆ, ರೈತ ಸಂಘಟನೆಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಲಿದ್ದೇವೆ’ ಎಂದೂ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.