ADVERTISEMENT

ಆ್ಯಪ್ ಮೂಲಕ ಬೆಟ್ಟಿಂಗ್: ₹26 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:30 IST
Last Updated 12 ನವೆಂಬರ್ 2020, 19:30 IST
ಬಂಧಿತ ಆರೋಪಿಗಳಾದ ಮಂಜೇಗೌಡ ಹಾಗೂ ವಿಜಯ್‌ಕುಮಾರ್
ಬಂಧಿತ ಆರೋಪಿಗಳಾದ ಮಂಜೇಗೌಡ ಹಾಗೂ ವಿಜಯ್‌ಕುಮಾರ್   

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಹಾಗೂ ಮಾಗಡಿ ರಸ್ತೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 26 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಮೊಬೈಲ್ ಆ್ಯಪ್‌, ಕರೆ ಹಾಗೂ ಜಾಲತಾಣ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ ಎನ್. ಕಿರಣ್ ಕುಮಾರ್ (46) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ₹15 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ಆರ್.ಟಿ. ನಗರದ ಗಿಡ್ಡಪ್ಪ ಬ್ಲಾಕ್ ನಿವಾಸಿಯಾದ ಕಿರಣ್ ಕುಮಾರ್, ಐಪಿಎಲ್ ಆರಂಭವಾದಾಗಿನಿಂದಲೂ ಬೆಟ್ಟಿಂಗ್ ನಡೆಸುತ್ತಿದ್ದ. ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ದೆಹಲಿ ತಂಡಗಳ ನಡುವಿನ ಪಂದ್ಯದ ವೇಳೆ ಆರೋಪಿ ಬೆಟ್ಟಿಂಗ್ ಕಟ್ಟಿಸಿಕೊಂಡಿದ್ದ' ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ADVERTISEMENT

ಇನ್ನೊಂದು ಪ್ರಕರಣದಲ್ಲಿ, ಜಾಲತಾಣವೊಂದರಲ್ಲಿ ನಕಲಿ ಖಾತೆ ತೆರೆದು ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

‘ಬಸವೇಶ್ವರನಗರದ ಕೆ. ವಿಜಯ್‌ಕುಮಾರ್ (47), ಕೆ.ಸಿ. ಬೋರೇಗೌಡ ಹಾಗೂ ಕಮಲಾನಗರದ ಮಂಜೇಗೌಡ (37) ಬಂಧಿತರು. ಬೆಟ್ಟಿಂಗ್‌ನಿಂದ ಗಳಿಸಿದ್ದ ಹಣವನ್ನು ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿಸಲಾಗಿದೆ. ಆರೋಪಿಗಳಿಂದ ಒಟ್ಟು ₹ 11.97 ಲಕ್ಷ ಹಾಗೂ 6 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.