ಬೆಂಗಳೂರು: ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಬಾಡಿಗೆ ನೆಪದಲ್ಲಿ ಪ್ರಯಾಣಿಕರನ್ನು ಆಟೊದಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪದಡಿ ಮನೋಜ್‌ಕುಮಾರ್ (24) ಎಂಬಾತ ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಮನೆಗಳಲ್ಲಿ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದಿದ್ದ ಮನೋಜ್, ಆಟೊ ಚಾಲಕ ಸೇರಿ ತನ್ನ ಮೂವರು ಸಹಚರರ ಜೊತೆ ಸೇರಿ ಕೊಂಡು ಕೃತ್ಯ ಎಸಗುತ್ತಿದ್ದ. ಆತನಿಂದ ₹ 7 ಲಕ್ಷ ಮೌಲ್ಯದ ಆಟೊ, 10 ಗ್ರಾಂ ಚಿನ್ನಾಭರಣ ಹಾಗೂ ನಿಕಾನ್ ಕಂಪ ನಿಯ ಎರಡು ಕ್ಯಾಮೆರಾಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ನ. 8 ರಂದು ರಾತ್ರಿ ಬಂದಿದ್ದ ದೂರುದಾರ, ಬೊಮ್ಮನಹಳ್ಳಿಗೆ ಹೋಗಲು ಆಟೊ ಗಳಿಗೆ ಕೈ ಮಾಡಿದ್ದರು. ಆಟೊ ನಿಲ್ಲಿಸಿದ್ದ ಆರೋಪಿ, ದೂರುದಾರರನ್ನು ಹತ್ತಿಸಿ ಕೊಂಡಿದ್ದ. ಮಾರ್ಗಮಧ್ಯೆ ಮನೋಜ್ ಹಾಗೂ ಇತರೆ ಮೂವರು ಆರೋಪಿಗಳು ಆಟೊ ಹತ್ತಿದ್ದರು. ‘ದೂರುದಾರರಿಗೆ ಚಾಕು ತೋರಿಸಿದ್ದ ಆರೋಪಿಗಳು, ಚಿನ್ನದ ಸರ ಸುಲಿಗೆ ಮಾಡಿದ್ದರು. ದೂರು ದಾರರನ್ನು ರಸ್ತೆಯಲ್ಲೇ ಇಳಿಸಿ, ಆಟೊ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ. ಸ್ಥಳ ಪರಿಶೀಲನೆ ಹಾಗೂ ಪುರಾವೆಗಳನ್ನು ಸಂಗ್ರಹಿಸಿ ಮನೋಜ್‌ನನ್ನು ಬಂಧಿಸಲಾಗಿದೆ. ಆಟೊ ಚಾಲಕ ಸೇರಿ ನಾಲ್ವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.
ಇದನ್ನೂ ಓದಿ... ಬೆಂಗಳೂರು | ಸೈನೆಡ್ ತಿನ್ನಿಸಿ ಕೊಲೆ: ಮೃತದೇಹಕ್ಕಾಗಿ ಹುಡುಕಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.