ಬೆಂಗಳೂರು: ನಗರದ ವಿದ್ಯಾಶಿಲ್ಪ ಅಕಾಡೆಮಿ ಶಾಲೆಯ ಸಾಹಿಲ್ ಗಿರಿಯಾ, ಅಭಿರಾಜ್ ಕಾಮತ್, ಅನನ್ಯ ಬಾಲಸುಬ್ರಮಣಿ, ವೀರ್ ಚೌಧರಿ, ಗುಂಜನ್ ರಾಜೀವ್ ಹಾಗೂ ಆರ್ಯನ್ ಅಗರ್ವಾಲ್ ವಿದ್ಯಾರ್ಥಿಗಳ ತಂಡವು ₹4 ಲಕ್ಷ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಸೌಲಭ್ಯ ವಂಚಿತ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.
ವಿವಿಧ ಭಾಗಗಳಲ್ಲಿರುವ ನೂರಕ್ಕೂ ಹೆಚ್ಚು ಸೌಲಭ್ಯ ವಂಚಿತ ಮಕ್ಕಳನ್ನು ಒಂದೆಡೆ ಸೇರಿಸಲು ದೇವನಹಳ್ಳಿ ಸಮೀಪ ‘ಮಕ್ಕಳಧಾಮ’ ನಿರ್ಮಿಸಲು ಸ್ಪರ್ಶ ಟ್ರಸ್ಟ್ ಜಮೀನು ಖರೀದಿಸಿತ್ತು. ಇವರೊಂದಿಗೆ ಕೈ ಜೋಡಿಸಿದ ಮಕ್ಕಳು ಬೋರ್‌ವೆಲ್ ಕೊರೆಸಲು ನಿರ್ಧರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.