ADVERTISEMENT

ಕಚ್ಚಾ ಬಾಂಬ್‌ ಪತ್ತೆ ಸ್ಪರ್ಧೆ: ರಾಜ್ಯ ತಂಡಕ್ಕೆ 12 ವಿಭಾಗಗಳಲ್ಲಿ ಗೆಲುವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:27 IST
Last Updated 17 ನವೆಂಬರ್ 2024, 16:27 IST
ಪ್ರಶಸ್ತಿಯೊಂದಿಗೆ ರಾಜ್ಯ ಪೊಲೀಸ್‌ ಪಡೆಯ ಆಂತರಿಕಾ ಭದ್ರತಾ ವಿಭಾಗದ ‘ಐಇಡಿ ಪತ್ತೆ ತಂಡ’
ಪ್ರಶಸ್ತಿಯೊಂದಿಗೆ ರಾಜ್ಯ ಪೊಲೀಸ್‌ ಪಡೆಯ ಆಂತರಿಕಾ ಭದ್ರತಾ ವಿಭಾಗದ ‘ಐಇಡಿ ಪತ್ತೆ ತಂಡ’   

ಬೆಂಗಳೂರು: ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಈಚೆಗೆ ನಡೆಸಿದ, ರಾಷ್ಟ್ರಮಟ್ಟದ ಕಚ್ಚಾಬಾಂಬ್‌ (ಐಇಡಿ) ಪತ್ತೆ ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸ್‌ ಆಂತರಿಕ ಭದ್ರತಾ ವಿಭಾಗದ ಐಇಡಿ ಪತ್ತೆ ತಂಡವು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಎನ್‌ಎಸ್‌ಜಿಯು ದೆಹಲಿಯಲ್ಲಿ ಇದೇ 11ರಿಂದ 16ವರೆಗೆ ಸ್ಪರ್ಧೆಯನ್ನು ಆಯೋಜಿಸಿತ್ತು. ಐದು ಅರೆಸೇನಾ ‍ಪಡೆಗಳು, 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ವಿಶೇಷ ಪಡೆಗಳು ಹಾಗೂ ಪೊಲೀಸ್‌ ಪಡೆಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. 

ಕಚ್ಚಾ ಬಾಂಬ್‌ ಪತ್ತೆ, ಬಾಂಬ್‌ ನಿಷ್ಕ್ರಿಯ, ಬಾಂಬ್‌ ಪತ್ತೆ ನಿರ್ವಹಣೆ ಕಾರ್ಯಾಚರಣೆಯ ಪ್ರಶ್ನೋತ್ತರ ಮತ್ತು ಪ್ರಾಯೋಗಿಕ ಸೇರಿ ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ರಾಜ್ಯದ ತಂಡವು ಎಲ್ಲಾ ವಿಭಾಗಗಳಲ್ಲೂ ಮೊದಲ ಸ್ಥಾನ ಪಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.