ADVERTISEMENT

ಗಾಳಿ ಮಳೆಗೆ ಕಬ್ಬನ್ ಉದ್ಯಾನದಲ್ಲಿ ಧರೆಗುರುಳಿದ 40ಕ್ಕೂ ಹೆಚ್ಚು ಮರ!

ಸಿಲಿಕಾನ್‌ ಸಿಟಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬನ್‌ ಉದ್ಯಾನದಲ್ಲಿನ 40ಕ್ಕೂ ಹೆಚ್ಚು ಮರಗಳು ಬುಡಸಮೇತ ಧರೆಗುರುಳಿವೆ.

​ಪ್ರಜಾವಾಣಿ ವಾರ್ತೆ
Published 22 ಮೇ 2023, 16:03 IST
Last Updated 22 ಮೇ 2023, 16:03 IST
ಭಾನುವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕಬ್ಬನ್‌ ಉದ್ಯಾನದಲ್ಲಿ ಮರವೊಂದು ಧರೆಗುರುಳಿದೆ.  – ಪ್ರಜಾವಾಣಿ ಚಿತ್ರ
ಭಾನುವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕಬ್ಬನ್‌ ಉದ್ಯಾನದಲ್ಲಿ ಮರವೊಂದು ಧರೆಗುರುಳಿದೆ.  – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬನ್‌ ಉದ್ಯಾನದಲ್ಲಿನ 40ಕ್ಕೂ ಹೆಚ್ಚು ಮರಗಳು ಬುಡಸಮೇತ ಧರೆಗುರುಳಿವೆ.

‘ಕಬ್ಬನ್‌ ಉದ್ಯಾನದಲ್ಲಿರುವ ಕೇಂದ್ರ ಗ್ರಂಥಾಲಯ, ಬ್ಯಾಂಡ್‌ ಸ್ಟ್ಯಾಂಡ್‌ ಸೇರಿ ವಿವಿಧ ಭಾಗಗಳಲ್ಲಿರುವ ಬೃಹತ್‌ ಮರಗಳು ನೆಲಕ್ಕುರುಳಿದ್ದು, ಕೆಲ ಮರಗಳ ರಂಬೆ–ಕೊಂಬೆಗಳು ಬಿದ್ದಿವೆ. ಪ್ರತಿವರ್ಷ ಮಳೆಗಾಲದಲ್ಲಿ ಮರಗಳು ಬೀಳುವುದು ಸಹಜ. ಬಿಬಿಎಂಪಿಯಿಂದ ಅನುಮತಿ ಪಡೆದು ಅವುಗಳನ್ನು ತೆರವುಗೊಳಿಸಲಾಗುವುದು. ಬಿಬಿಎಂಪಿಯೇ ನಿಗದಿಪಡಿಸಿದ ಬೆಲೆಗೆ ಮರಗಳನ್ನು ಹರಾಜು ಹಾಕಲಾಗುತ್ತದೆ. ಬಿದ್ದ ಮರಗಳ ಸ್ಥಳದಲ್ಲಿ ಬೇರೆ ಸಸಿಗಳನ್ನು ನೆಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ. ಬಾಲಕೃಷ್ಣ ಮಾಹಿತಿ ನೀಡಿದರು.

‘ಉದ್ಯಾನದಲ್ಲಿ 150ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ಹಲವಾರು ಮರಗಳಿಗೆ ಹಾನಿಯಾಗಿದೆ’ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘ ದೂರಿದೆ.

ADVERTISEMENT

ಲಾಲ್‌ಬಾಗ್‌ ಉದ್ಯಾನದಲ್ಲೂ ಹಲವಾರು ಮರಗಳು ಬುಡಸಮೇತ ಬಿದ್ದಿದ್ದು. ಬಹಳಷ್ಟು ಮರಗಳಿಗೆ ಹಾನಿಯಾಗಿದೆ ಎಂದು ಲಾಲ್‌ಬಾಗ್‌ ವಾಯುವಿಹಾರಿಗಳಾದ ಸುಷ್ಮಾ, ಶಿಲ್ಪಾ ಗಿರಿಧರ್ ತಿಳಿಸಿದರು.

ಭಾನುವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕಬ್ಬನ್‌ ಉದ್ಯಾನದಲ್ಲಿ ಮರವೊಂದು ಧರೆಗುರುಳಿದೆ. ಪ್ರಜಾವಾಣಿ ಚಿತ್ರ
ಭಾನುವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕಬ್ಬನ್‌ ಉದ್ಯಾನದಲ್ಲಿ ಮರವೊಂದು ಧರೆಗುರುಳಿದೆ. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.