ADVERTISEMENT

ಬೆಂಗಳೂರು | ಸಾಹಿತ್ಯೋತ್ಸವದಲ್ಲಿ ಸಾಂಸ್ಕೃತಿಕ ರಸದೌತಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 15:57 IST
Last Updated 13 ಆಗಸ್ಟ್ 2023, 15:57 IST
ನಗರದಲ್ಲಿ ಭಾನುವಾರ ನಡೆದ ಜಶ್ನ್–ಎ–ಅದಾಮ್‌ ಸಾಹಿತ್ಯೋತ್ಸವದ ಸಾಂಸ್ಕೃತಿಕ ಕಾರವಾನ್‌ ವಿರಾಸತ್‌ನಲ್ಲಿ ಕಲಾವಿದೆ ಅರ್ಪಿತಾ ಬ್ಯಾನರ್ಜಿ ನೇತೃತ್ವದ ತಂಡವು ನೃತ್ಯ ಪ್ರಸ್ತುತ ಪಡಿಸಿತು.
ನಗರದಲ್ಲಿ ಭಾನುವಾರ ನಡೆದ ಜಶ್ನ್–ಎ–ಅದಾಮ್‌ ಸಾಹಿತ್ಯೋತ್ಸವದ ಸಾಂಸ್ಕೃತಿಕ ಕಾರವಾನ್‌ ವಿರಾಸತ್‌ನಲ್ಲಿ ಕಲಾವಿದೆ ಅರ್ಪಿತಾ ಬ್ಯಾನರ್ಜಿ ನೇತೃತ್ವದ ತಂಡವು ನೃತ್ಯ ಪ್ರಸ್ತುತ ಪಡಿಸಿತು.    

ಬೆಂಗಳೂರು: ‘ಇಂದಿನ ಒತ್ತಡ ಹಾಗೂ ವೇಗದ ಜೀವನಕ್ಕೆ ಸಂಗೀತ ಹಾಗೂ ಸಾಹಿತ್ಯವು ಚಿಕಿತ್ಸಕ ಅನುಭವ ನೀಡಬಲ್ಲದು. ಸಂಗೀತ ಆಲಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯವಾಗಲಿದೆ’ ಎಂದು ಉರ್ದು ಕವಿ ಕುನ್ವರ್‌ ರಂಜೀತ್‌ ಚವ್ಹಾಣ್‌ ಹೇಳಿದರು.

ನಗರದಲ್ಲಿ ಕೇಂದ್ರದ ಸಂಸ್ಕೃತಿ ಸಚಿವಾಲಯ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆದ ಜಶ್ನ್–ಎ–ಅದಾಮ್‌ ಸಾಹಿತ್ಯೋತ್ಸವದ ಸಾಂಸ್ಕೃತಿಕ ಕಾರವಾನ್‌ ವಿರಾಸತ್‌ನಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಯುವಜನರ ನಗರವಾಗಿದೆ. ಅವರನ್ನು ರಂಜಿಸುವ ಉದ್ದೇಶದಿಂದ ನಗರದಲ್ಲಿ ಈ ಸಾಹಿತ್ಯೋತ್ಸವ ಆಯೋಜಿಸಲಾಗಿದೆ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಿದೆ. ಸಾಧ್ಯವಾದಷ್ಟು ಜನರಿಗೆ ಕಲಬೆರಕೆಯಿಲ್ಲದ ಅನುಭವಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ’ ಎಂದು ಹೇಳಿದರು.

ADVERTISEMENT

ಉತ್ಸವದಲ್ಲಿ ಸಮಾಜದಲ್ಲಿ ಪ್ರಾದೇಶಿಕ ರಂಗಭೂಮಿ ಮತ್ತು ಭಾಷೆಗಳ ಪ್ರಭಾವ ಕುರಿತು ನಡೆದ ಸಂವಾದದಲ್ಲಿ ನಟ ಪ್ರಕಾಶ್‌ ಬೆಳವಾಡಿ, ನಿರ್ಮಾಪಕ ಫೈಸಲ್‌ ಮಲ್ಲಿಕ್‌ ಹಾಗೂ ಅಶೋಕ್‌ ಚಕ್ರಧರ್‌ ಪಾಲ್ಗೊಂಡಿದ್ದರು.‌

ಸಾಂಸ್ಕೃತಿಕ ವೈಭವ

ಎರಡು ದಿನಗಳ ಕಾರ್ಯಕ್ರಮವು ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣ ನೀಡಿತು. ನಾಗಭೂಷಣ ಹೆಗಡೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ಕಪಿಲ್‌ ಜಾಫೇರಿ ಅವರು ಉರ್ದು ಭಾಷೆಯಲ್ಲಿ ದಸ್ತಂಗೋಯ್‌ ಕಥೆ ಪ್ರಸ್ತುತಪಡಿಸಿ ರಂಜಿಸಿದರು. ಅರ್ಪಿತಾ ಬ್ಯಾನರ್ಜಿ ತಂಡವು ಕಥಕ್‌ ಪ್ರದರ್ಶನ ನೀಡಿ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.