ADVERTISEMENT

ಮೋಹನ್ ದಾಸರಿ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಎಎಪಿಯಿಂದ ನಾಮಪತ್ರ

ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ: 6 ಎಫ್‌ಐಆರ್ l ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 5:25 IST
Last Updated 16 ಏಪ್ರಿಲ್ 2023, 5:25 IST
ಮೋಹನ್ ದಾಸರಿ
ಮೋಹನ್ ದಾಸರಿ   

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿ ರಾಜ್ಯ ಘಟಕದ ಕಾರ್ಯಾಧ್ಯಕ್ಷರೂ ಆಗಿರುವ ಮೋಹನ್ ದಾಸರಿ ಅವರು ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.

‘ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ, ಶಾಂತಿಗೆ ಧಕ್ಕೆ ತಂದ ಆರೋಪದಡಿ 6 ಎಫ್‌ಐಆರ್ (ಎಸ್‌.ಜೆ.ಪಾರ್ಕ್, ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ಬಸವೇಶ್ವನಗರ, ಬೆಳ್ಳಂದೂರು ಠಾಣೆ) ದಾಖಲಾಗಿವೆ. ಪ್ರತಿಭಟನೆಯಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದ ಆರೋಪದಡಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣವಿದೆ’ ಎಂದು ಮೋಹನ್ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.

ಬಿಇ ಹಾಗೂ ಎಂ.ಎಸ್ ಪದವೀಧರ ರಾಗಿರುವ ಮೋಹನ್, ಸೈಕ್ರೋನಸ್ ಟೆಕ್ನಾಲಜಿ ಕಂಪನಿಯಲ್ಲಿ ಸಹ ತಾಂತ್ರಿಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. 2021–22ರಲ್ಲಿ ₹ 37.47 ಲಕ್ಷ ವಾರ್ಷಿಕ ಆದಾಯ ಘೋಷಿಸಿರುವ ಇವರ ಒಟ್ಟು ಆಸ್ತಿ ₹ 1.54 ಕೋಟಿ (₹ ₹12.54 ಲಕ್ಷ ಚರಾಸ್ತಿ, ₹ 90 ಲಕ್ಷ ಸ್ಥಿರಾಸ್ತಿ).
‘₹74 ಸಾವಿರ ಮೌಲ್ಯದ ಬಜಾಜ್ ಅವೆಂಜರ್ ಬೈಕ್, ₹ 10.30 ಲಕ್ಷ ಮೌಲ್ಯದ ಮಹೇಂದ್ರಾ ಟಿಯುವಿ 300 ಕಾರಿದೆ. 83.80 ಲಕ್ಷ ಸಾಲದ ಹೊಣೆಯಿದೆ’ ಎಂದೂ ಮೋಹನ್ ಘೋಷಿಸಿಕೊಂಡಿದ್ದಾರೆ.

ADVERTISEMENT

‘ಪತ್ನಿ ಎ.ಸಿ. ವಾಣಿಶ್ರೀ ಬಾಷ್ ಕಂಪನಿಯಲ್ಲಿ ಹಿರಿಯ ಆರ್ಕಿಟೆಕ್ಟ್ ಆಗಿದ್ದಾರೆ. 2021–22ರಲ್ಲಿ ₹ 21.68 ಲಕ್ಷ ವಾರ್ಷಿಕ ಆದಾಯ ಘೋಷಿಸಿರುವ ಇವರ ಒಟ್ಟು ಆಸ್ತಿ ₹60.60 ಲಕ್ಷ’ ಎಂಬ ಮಾಹಿತಿ ಪ್ರಮಾಣಪತ್ರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.