ADVERTISEMENT

‘ಬೇಂದ್ರೆ ಕಾವ್ಯಗಳು ಕನ್ನಡದ ಶಕ್ತಿ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:37 IST
Last Updated 28 ಫೆಬ್ರುವರಿ 2021, 5:37 IST
ಸಾಹಿತಿ ವೆಂಕಟೇಶ್ ಆರ್.ಚೌಥಾಯಿ ಕನ್ನಡ ಸಾಂಸ್ಕತಿಕ ರಂಗದ ಪರವಾಗಿ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನಕೋಶ’ ಮತ್ತು ‘ಮಕರಂದ’ ಮಕ್ಕಳ ಸಣ್ಣ ಕಥೆಗಳ ಪುಸ್ತಕಗಳನ್ನು ವಿತರಿಸಿದರು. ಬಾಲಾಜಿ, ಬಾಲಕೃಷ್ಣಯ್ಯ, ಡಿ.ಸಿದ್ದರಾಜು, ಡಾ.ಪುಷ್ಪ ಇದ್ದಾರೆ.
ಸಾಹಿತಿ ವೆಂಕಟೇಶ್ ಆರ್.ಚೌಥಾಯಿ ಕನ್ನಡ ಸಾಂಸ್ಕತಿಕ ರಂಗದ ಪರವಾಗಿ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನಕೋಶ’ ಮತ್ತು ‘ಮಕರಂದ’ ಮಕ್ಕಳ ಸಣ್ಣ ಕಥೆಗಳ ಪುಸ್ತಕಗಳನ್ನು ವಿತರಿಸಿದರು. ಬಾಲಾಜಿ, ಬಾಲಕೃಷ್ಣಯ್ಯ, ಡಿ.ಸಿದ್ದರಾಜು, ಡಾ.ಪುಷ್ಪ ಇದ್ದಾರೆ.   

ನೆಲಮಂಗಲ: ‘ಭಾಷೆಯೊಂದಿಗೆ ಆಳವಾದ ಸಂಬಂಧ ಹೊಂದಿದ್ದ ದ.ರಾ. ಬೇಂದ್ರೆ ಅವರ ಕಾವ್ಯಗಳು ಕನ್ನಡದ ಶಕ್ತಿಯಾಗಿವೆ’ ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೇಂದ್ರೆ ಅವರ 125ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಬದುಕಿನಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಂಡು ಕಾವ್ಯ ಸಂಸ್ಕೃತಿಯನ್ನು ನಿರ್ಮಿಸುವ ಲೋಕೋಪಯೋಗಿ ಕೆಲಸವನ್ನು ಅವರು ಮಾಡಿದ್ದರು’ ಎಂದರು.

ಸಾಹಿತಿ ವೆಂಕಟೇಶ್ ಆರ್. ಚೌಥಾಯಿ ಅವರು ಕನ್ನಡ ಸಾಂಸ್ಕತಿಕ ರಂಗದ ಪರವಾಗಿ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನಕೋಶ’ ಮತ್ತು ‘ಮಕರಂದ’ ಮಕ್ಕಳ ಸಣ್ಣ ಕಥೆಗಳ ಪುಸ್ತಕಗಳನ್ನು ವಿತರಿಸಿದರು ಮತ್ತು ಬೇಂದ್ರೆ ಕಾವ್ಯಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.

ADVERTISEMENT

ಪ್ರಾಂಶುಪಾಲ ಬಾಲಕೃಷ್ಣಯ್ಯ, ‘ಪ್ರತಿ ತಿಂಗಳು ರಾಜ್ಯೋತ್ಸವವನ್ನು ಆಚರಿಸುತ್ತಿರುವ, ಕನ್ನಡ ಕವಿಗಳ ಜನ್ಮದಿನದಂದು ಅವರನ್ನು ಸ್ಮರಿಸುವ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಂಗದ ಕಾರ್ಯ ಶ್ಲಾಘನೀಯ' ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಶ್ರೇಷ್ಠಿ, ಬಿಎಸ್ಎನ್ಎಲ್ ಕಾರ್ಮಿಕ ಮುಖಂಡ ಬಾಲಾಜಿ, ಸಾಂಸ್ಕೃತಿಕ ರಂಗದ ಅಶ್ವತ್ಥ ನಾರಾಯಣ್, ಯುವ ಮುಖಂಡ ವಿಜಯ್‌ಕುಮಾರ್‌, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ದಿವ್ಯಶ್ರೀ, ಉಪನ್ಯಾಸಕಿ ಶ್ವೇತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.