ಬೆಂಗಳೂರು: ನಾವಿನ್ಯ ಮತ್ತು ಉದ್ಯಮಶೀಲ ಪರಿಸರ ವ್ಯವಸ್ಥೆಯಲ್ಲಿ ವೇಗವರ್ಧನೆ ತರಲು ಅಮೆರಿಕದ ಡಸಾಲ್ಟ್ ಸಿಸ್ಟಮ್ಸ್ ಜೊತೆಗೆ ರಾಮಯ್ಯ ಟೆಕ್ನಾಲಜಿ ಬಿಜಿನೆಸ್ ಇನ್‌ಕ್ಯುಬೇಟರ್ (ಆರ್‌ಟಿಬಿಐ) ಒಪ್ಪಂದ ಮಾಡಿಕೊಂಡಿದೆ.
ಅಂತರರಾಷ್ಟ್ರೀಯ ಲೆಕ್ಕಾಚಾರ ಹಾಗೂ ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಕಾರ ಹಾಗೂ ಯೋಜನೆಗಳನ್ನು ಕಂಡುಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರ್‌ಟಿಬಿಐ ತಿಳಿಸಿದೆ.
ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ (ಆರ್‌ಯುಎಎಸ್) 2018ರಲ್ಲಿ ಸ್ಟಾರ್ಟ್‌ಅಪ್ ನೀತಿಯ ಅಡಿಯಲ್ಲಿ ಆರ್‌ಟಿಬಿಐ ಅನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರ್ಕಾರದ ಐಟಿ–ಬಿಟಿ ಇಲಾಖೆಯ ಬೆಂಬಲ ಕೂಡ ಸಿಕ್ಕಿತ್ತು. ಇದೀಗ ಬೇರೆ ದೇಶದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದೆ.
ಡಸಾಲ್ಟ್ ಸಿಸ್ಟಮ್ಸ್ ಅಮೆರಿಕಾಸ್ ಕಾರ್ಪೋರೇಶನ್ ಉಪಾಧ್ಯಕ್ಷ ಸುಚಿತ್ ಜೈನ್ ನೇತೃತ್ವದಲ್ಲಿ ಮೂವರು ಸದಸ್ಯರ ನಿಯೋಗ ಆರ್‌ಟಿಬಿಐಗೆ ಭೇಟಿ ನಿಡಿದ್ದು, ಆರ್‌ಯುಎಎಸ್ ಕುಲಪತಿ ಎಂ.ಆರ್. ಜಯರಾಮ್ ನೇತೃತ್ವದಲ್ಲಿ ಚರ್ಚೆಗಳು ನಡೆದವು. ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್ ವಿಭಾಗಗಳಲ್ಲಿ ಸಾಮರ್ಥ್ಯ ನಿರ್ಮಾಣ ಮಾಡಲು ಮತ್ತು ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಆರ್‌ಟಿಬಿಐ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.