ಬೆಂಗಳೂರು: 2023–24 ನೇ ಸಾಲಿನಲ್ಲಿ ಜಿಲ್ಲಾಡಳಿತಗಳ ಮೂಲಕ ವಿವಿಧ ಮಹಾಪುರುಷರ ಜಯಂತಿಗಳನ್ನು ರಾಜ್ಯಮಟ್ಟದಲ್ಲಿ ಎಲ್ಲೆಲ್ಲಿ ಆಚರಿಸಬೇಕು ಎಂದು ಸೂಚನೆ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ₹5 ಲಕ್ಷ, ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ₹50 ಸಾವಿರ ಮತ್ತು ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ₹20 ಸಾವಿರ ನಿಗದಿ ಮಾಡಲಾಗಿದೆ.
ಜಯಂತಿ : ದಿನಾಂಕ : ಜಿಲ್ಲೆ
ನಾಲ್ವಡಿ ಕೃಷ್ಣರಾಜ ಒಡೆಯರ್ : 04.06.23 : ಮಂಡ್ಯ
ಕೆಂಪೇಗೌಡ : 27.06.23 : ಹಾಸನ
ಫ.ಗು.ಹಳಕಟ್ಟಿ : 02.07.23 ವಿಜಯಪುರ
ಹಡಪದ ಅಪ್ಪಣ್ಣ : 03.07.23 : ಧಾರವಾಡ
ನುಲಿಯ ಚಂದಯ್ಯ : 31.08.23 : ಬೆಂಗಳೂರು(ಗ್ರಾ)
ಬ್ರಹ್ಮಶ್ರೀ ನಾರಾಯಣಗುರು : 31.08.23 : ಉಡುಪಿ
ಶ್ರೀಕೃಷ್ಣ : 06.09.23 : ದಕ್ಷಿಣ ಕನ್ನಡ
ವಿಶ್ವಕರ್ಮ : 17.09.23 : ವಿಜಯನಗರ
ಕಿತ್ತೂರು ರಾಣಿ ಚನ್ನಮ್ಮ : 23.10.23 : ಬೆಳಗಾವಿ
ಒನಕೆ ಓಬವ್ವ : 11.11.23 : ದಾವಣಗೆರೆ
ಕನಕ ಜಯಂತಿ : 30.11.23 : ಗದಗ
ವಿಶ್ವಮಾನವ ದಿನಾಚರಣೆ : 29.12.23 : ಮೈಸೂರು
ಅಮರಶಿಲ್ಪಿ ಜಕಣಾಚಾರಿ ದಿನ : 01.01.24 : ತುಮಕೂರು
ಶಿವಯೋಗಿ ಸಿದ್ದರಾಮ : 15.01.24 : ಚಿತ್ರದುರ್ಗ
ಮಹಾಯೋಗಿ ವೇಮನ : 19.01.24 : ರಾಯಚೂರು
ಅಂಬಿಗರ ಚೌಡಯ್ಯ: 21.01.24 : ಕಾರವಾರ
ಸವಿತಾ ಮಹರ್ಷಿ : ರಥಸಪ್ತಮಿ ದಿನ : ಚಿಕ್ಕಬಳ್ಳಾಪುರ
ಮಡಿವಾಳ ಮಾಚಿದೇವ : 01.02.24 : ರಾಮನಗರ
ಸಂತ ಸೇವಾಲಾಲ್ : 15.02.24 : ಯಾದಗಿರಿ
ಕಾಯಕ ಶರಣರ ಜಯಂತಿ : ಮಹಾಶಿವರಾತ್ರಿ : ಕೊಪ್ಪಳ
ಛತ್ರಪತಿ ಶಿವಾಜಿ : 19.02.24 : ಬಾಗಲಕೋಟೆ
ಸಂತಕವಿ ಸರ್ವಜ್ಞ : 20.02.24 : ಕೊಡಗು
ಯೋಗಿ ನಾರೇಯಣ : ಪಾಲ್ಗುಣ ಮಾಸದ ಹುಣ್ಣಿಮೆ : ಕೋಲಾರ
ರೇಣುಕಾಚಾರ್ಯ : 16.03.23 : ಹಾವೇರಿ
ದೇವರದಾಸಿಮಯ್ಯ : 2024 ನೇ ಕ್ಯಾಲೆಂಡರ್ ಅನ್ವಯ : ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.