ADVERTISEMENT

ಡೇಟಿಂಗ್ ಆ್ಯಪ್ ಸ್ನೇಹ; ₹ 18.29 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 7:17 IST
Last Updated 19 ಅಕ್ಟೋಬರ್ 2021, 7:17 IST
ಡೇಟಿಂಗ್ ಆ್ಯಪ್ ಸ್ನೇಹ- ಪ್ರಾತಿನಿಧಿಕ ಚಿತ್ರ
ಡೇಟಿಂಗ್ ಆ್ಯಪ್ ಸ್ನೇಹ- ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮೊಬೈಲ್ ಡೇಟಿಂಗ್ ಆ್ಯಪ್‌ ಸ್ನೇಹದಿಂದಾಗಿ ನಗರದ ಮಹಿಳೆಯೊಬ್ಬರು ₹ 18.26 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಸ್ಟಿನ್‌ ಟೌನ್‌ ನಿವಾಸಿಯಾಗಿರುವ 37 ವರ್ಷದ ಮಹಿಳೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ಮೊಬೈಲ್ ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಖಾತೆ ತೆರೆದಿದ್ದರು. ಅದೇ ಆ್ಯಪ್‌ನಲ್ಲಿ ಅವರಿಗೆ ಆರೋಪಿ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸ್ನೇಹ ಏರ್ಪಟ್ಟು ಸಲುಗೆಯಿಂದ ಮಾತನಾಡಲಾರಂಭಿಸಿದ್ದರು. ಪರಸ್ಪರ ಫೋಟೊವನ್ನೂ ವಿನಿಮಯ ಮಾಡಿಕೊಂಡಿದ್ದರು’

ADVERTISEMENT

‘ವಿದೇಶದಲ್ಲಿ ನೆಲೆಸಿರುವುದಾಗಿ ಹೇಳಿದ್ದ ಆರೋಪಿ, ಮಹಿಳೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ನಿತ್ಯವೂ ಚಾಟಿಂಗ್ ಹಾಗೂ ಕರೆ ಮಾಡುತ್ತಿದ್ದ ಆರೋಪಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವುದಾಗಿ ಹೇಳಿದ್ದ. ನಂತರ, ಹಂತ ಹಂತವಾಗಿ ಮಹಿಳೆಯಿಂದ ಹಲವು ಬ್ಯಾಂಕ್ ಖಾತೆಗಳಿಗೆ ₹ 18.29 ಲಕ್ಷ ಹಾಕಿಸಿಕೊಂಡಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಹಣ ಪಡೆದ ನಂತರ ಆರೋಪಿ, ಆ್ಯಪ್‌ನಲ್ಲಿದ್ದ ತನ್ನ ಖಾತೆಯನ್ನು ಅಳಿಸಿದ್ದಾನೆ. ನಕಲಿ ಖಾತೆ ತೆರೆದು ಆರೋಪಿ ವಂಚಿಸಿರುವ ಮಾಹಿತಿ ಇದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.