ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ನಾಗರಿಕರಿಂದ 70 ಸಾವಿರಕ್ಕೂ ಹೆಚ್ಚು ಸಲಹೆ, ಸೂಚನೆಗಳು ಬಂದಿದ್ದು, ಅವುಗಳನ್ನು ಕ್ರೋಡಿಕರಿಸಿ ವರದಿ ನೀಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
‘ಪ್ರಗತಿಯತ್ತ ಬೆಂಗಳೂರು, ನೆಮ್ಮದಿಯತ್ತ ನಾಗರಿಕರು’ ಎಂಬ ಘೋಷವಾಕ್ಯದ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ನೋಡಲ್ ಸಂಸ್ಥೆಗಳು ಮತ್ತು ಶೈಕ್ಷಣಿಕ ಪಾಲುದಾರರನ್ನು ನೇಮಿಸಲಾಗಿದೆ. ಅವರು ನಾಗರಿಕರ ಎಲ್ಲ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಒಂದು ವಾರದಲ್ಲಿ ವರದಿ ನೀಡಬೇಕು ಎಂದರು.
‘ಬ್ರ್ಯಾಂಡ್ ಬೆಂಗಳೂರು’ ಏಳು ವಿಷಯಗಳ ಕುರಿತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿತ್ತು. ಅದನ್ನು ಪರಾಮರ್ಶಿಸಿದ ಡಿಸಿಎಂ, ಅಧಿಕಾರಿಗಳಿಗೆ ಶುಕ್ರವಾರ ವರದಿ ನೀಡಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.