ADVERTISEMENT

ಬೇತಮಂಗಲ: ಸರ್ಕಾರಿ ಗೋಶಾಲೆಯಲ್ಲಿ ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:30 IST
Last Updated 17 ನವೆಂಬರ್ 2022, 21:30 IST
ಬೇತಮಂಗಲ ಸಮೀಪದ ಗುಟ್ಟಹಳ್ಳಿ ಸರ್ಕಾರಿ ಗೋಶಾಲೆಯಲ್ಲಿ ಹಸುಗಳ ಸಾವಿನಿಂದ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.
ಬೇತಮಂಗಲ ಸಮೀಪದ ಗುಟ್ಟಹಳ್ಳಿ ಸರ್ಕಾರಿ ಗೋಶಾಲೆಯಲ್ಲಿ ಹಸುಗಳ ಸಾವಿನಿಂದ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.   

ಬೇತಮಂಗಲ: ಇಲ್ಲಿನ ಸರ್ಕಾರಿ ಗೋಶಾಲೆಯಲ್ಲಿ 10ಕ್ಕೂ ಹೆಚ್ಚು ಹಸು ಮತ್ತು ಕರುಗಳು ಮೃತಪಟ್ಟಿವೆ ಎಂದು ಆರೋಪಿಸಲಾಗಿದೆ.

ಬೇತಮಂಗಲ ಸಮೀಪದ ಗುಟ್ಟಹಳ್ಳಿಯಲ್ಲಿ (ಬಂಗಾರು ತಿರುಪತಿ) ಒಂದು ವರ್ಷದ ಹಿಂದೆ ಪ್ರಾರಂಭವಾದ ಸರ್ಕಾರಿ ಗೋಶಾಲೆಯಲ್ಲಿ ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಗೋಶಾಲೆ ಪ್ರಾರಂಭದಲ್ಲಿ 27 ಜಾನುವಾರು ಇದ್ದವು. ಬಂಗಾರು ತಿರುಪತಿ ದೇವಾಲಯಕ್ಕೆ ಭಕ್ತರು ನೀಡುವ ಹಣವನ್ನು ಗೋಶಾಲೆ ಪೋಷಣೆಗೆ ವಿನಿಯೋಗಿಸಲಾಗುತ್ತಿತ್ತು. ಗೋಶಾಲೆ ಅಧಿಕಾರಿಗಳು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹಸು, ಕರುಗಳು ಮೃತಪಟ್ಟಿವೆ ಎಂದು ಆರೋಪಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.