ADVERTISEMENT

ಹೊಸದಾಗಿ 1 ಲಕ್ಷ ಆಟೊಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:33 IST
Last Updated 6 ಜುಲೈ 2024, 16:33 IST
   

ಬೆಂಗಳೂರು: ನಗರದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಅದಕ್ಕೆ ಅನುಗುಣವಾಗಿ 1 ಲಕ್ಷ ಆಟೊ ರಿಕ್ಷಾಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ನಗರದಲ್ಲಿ ಸದ್ಯ 1.55 ಲಕ್ಷ ಆಟೊಗಳಿವೆ. ಇವುಗಳ ಸಂಖ್ಯೆಯನ್ನು ಮುಂದಿನ ಐದು ವರ್ಷಗಳಲ್ಲಿ 2.55 ಲಕ್ಷಕ್ಕೆ ಏರಿಸಲಾಗುವುದು’ ಎಂದು ಸಾರಿಗೆ ಇಲಾಖೆ ಈ ಕುರಿತ ಅಧಿಸೂಚನೆಯಲ್ಲಿ ತಿಳಿಸಿದೆ.

‘ವಾಯು ಮತ್ತು ಶಬ್ದ ಮಾಲಿನ್ಯವನ್ನು ತಪ್ಪಿಸಲು ಎಲ್‌ಪಿಜಿ, ಸಿಎನ್‌ಜಿ ಕಿಟ್‌, ಎಲೆಕ್ಟ್ರಿಕ್‌ನ ‘ಹಸಿರು’ ಆಟೊಗಳಿಗೆ ಪರವಾನಗಿ ನೀಡಲಾಗುವುದು. ಈ ಆಟೊಗಳು ಡಿಜಿಟಲ್ ದರ ಮೀಟರ್‌ ಹೊಂದಿರಬೇಕು.  ಈಗ ಆಟೊರಿಕ್ಷಾ ಪರ್ಮಿಟ್ ಹೊಂದಿರುವವರಿಗೆ ಪರವಾನಗಿ ನೀಡಲಾಗುವುದಿಲ್ಲ’ ಎಂದು ತಿಳಿಸಿದೆ. 

ADVERTISEMENT

ಈ ಹಿಂದೆ 2018ರಲ್ಲಿ 30 ಸಾವಿರ ಆಟೊಗಳಿಗೆ ಪರವಾನಗಿಯನ್ನು ನೀಡಲು ಆದೇಶಿಸಲಾಗಿತ್ತು. ಐದು ವರ್ಷಗಳ ನಂತರ 1 ಲಕ್ಷ ಆಟೊಗಳಿಗೆ ಪರವಾನಗಿ ನೀಡಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.