ADVERTISEMENT

ದೀಪಾವಳಿ ಹಬ್ಬ: ಹೆಚ್ಚಿದ ಜನ, ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
<div class="paragraphs"><p>ದೀಪಾವಳಿ ಹಬ್ಬ ಅಂಗವಾಗಿ ತಮ್ಮ ಊರುಗಳಿಗೆ ತೆರಳಲು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಶನಿವಾರ ಕಾದು ಕುಳಿತಿದ್ದ ದೃಶ್ಯ </p></div>

ದೀಪಾವಳಿ ಹಬ್ಬ ಅಂಗವಾಗಿ ತಮ್ಮ ಊರುಗಳಿಗೆ ತೆರಳಲು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಶನಿವಾರ ಕಾದು ಕುಳಿತಿದ್ದ ದೃಶ್ಯ

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ಉದ್ಯೋಗ ಹಾಗೂ ನಾನಾ ಕಾರಣಗಳಿಂದ ನಗರದಲ್ಲಿ ನೆಲೆಸಿರುವವರು ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ಹೊರಟಿರುವುದರಿಂದ ನಗರದ ಬಸ್‌ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ ಉಂಟಾಯಿತು. ಹೊರಜಿಲ್ಲೆ, ಹೊರರಾಜ್ಯಗಳನ್ನು ಸಂಪರ್ಕಿಸುವ ನಗರದ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಡಕುಂಟಾಯಿತು.

ADVERTISEMENT

ಶುಕ್ರವಾರವೇ ಜನಸಂದಣಿ ಕಂಡು ಬಂದಿತ್ತು. ಶನಿವಾರ ದಟ್ಟಣೆ ಇನ್ನಷ್ಟು ಹೆಚ್ಚಾಯಿತು. ಜನರು ಲಗೇಜುಗಳೊಂದಿಗೆ ‌ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ರೈಲು‌ ನಿಲ್ದಾಣ, ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳ ಕಡೆಗೆ ಗುಂಪು ಗುಂಪಾಗಿ ಬರತೊಡಗಿದ್ದರು. 

ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ ಸಹಿತ ವಿವಿಧ ನಗರಗಳಿಗೆ ಹೋಗುವವರು ನಿಲ್ದಾಣಗಳಲ್ಲಿ ಜಮಾಯಿಸಿದ್ದರಿಂದ ಬಸ್‌, ರೈಲು ನಿಲ್ದಾಣಗಳು ಕಿಕ್ಕಿರಿದವು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದ ಜನ, ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಹುಡುಕಾಟ ನಡೆಸಿದರು.

ಚಾಲುಕ್ಯ ವೃತ್ತ, ಆನಂದರಾವ್‌ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್‌ಎಂಸಿ ಯಾರ್ಡ್‌, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು. ಮೆಜೆಸ್ಟಿಕ್‌ ನಿಲ್ದಾಣದಿಂದ ಹೊರಟಿದ್ದ ಬಸ್‌ಗಳು, ದಟ್ಟಣೆಯಿಂದಾಗಿ ನಿಧಾನವಾಗಿ ಸಂಚರಿಸಿದವು.

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಕೆಎಸ್‌ಆರ್‌ಟಿಸಿ, ಹೆಚ್ಚುವರಿಯಾಗಿ 2,000 ಬಸ್‌ಗಳ ವ್ಯವಸ್ಥೆ ಮಾಡಿತ್ತು. ಖಾಸಗಿ ಕಂಪನಿಗಳು ಸಹ ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.