ಬೆಂಗಳೂರು: ‘ಪೊಲೀಸರ ಮೇಲೆ ವಕೀಲರು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ದೆಹಲಿಯ ಪೊಲೀಸರು ಇಲಾಖೆಯ ಪ್ರಧಾನ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದು, ಕರ್ನಾಟಕದ ಪೊಲೀಸರು ಸಹ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ’ಐ ಸಪೋರ್ಟ್ ದೆಹಲಿ ಪೊಲೀಸ್’ ಎಂಬ ಪೋಸ್ಟ್ಗಳನ್ನು ಪೊಲೀಸರು ಪ್ರಕಟಿಸಿದ್ದಾರೆ. ಬೆಂಗಳೂರಿನ ಬಹುತೇಕ ಪೊಲೀಸರು ತಮ್ಮವಾಟ್ಸ್ಆ್ಯಪ್ ಸಂಖ್ಯೆಯ ಸ್ಟೇಟಸ್ನಲ್ಲೂ ‘ಐ ಸಪೋರ್ಟ್ ದೆಹಲಿ ಪೊಲೀಸ್’ ಎಂದು ಲಾಂಛನ ಸಮೇತ ಫೋಟೊ ಹಾಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.