ನೆಲಮಂಗಲ: ಫಲವತ್ತಾದ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದು, ಬದಲಿಗೆ ಕೃಷಿ ಚಟುವಟಿಕೆಗಳಿಗೆ ಪೂರಕ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕೊಡಿಗೆಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ರೈತರು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಕೆಂಚನಪುರ, ಬಳಗೆರೆ ಗ್ರಾಮಸ್ಥರು ಹಾಗೂ ವಿವಿಧ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ಕೊಡಿಗೆಹಳ್ಳಿಯ ಲಕ್ಷ್ಮಣ ಸ್ವಾಮೀಜಿ ಮಠದಿಂದ ಕಾಲ್ನಡಿಗೆಯ ಮೂಲಕ ಪಂಚಾಯತಿ ಕಚೇರಿವರೆಗೆ ತೆರಳಿ ಅಧ್ಯಕ್ಷ ಆಂಜನಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ಅವರಿಗೆ ಮನವಿ ಸಲ್ಲಿಸಿದರು. ಕೃಷಿ ಭೂಮಿಯನ್ನು ಸ್ವಾಧೀನವನ್ನು ಕೈಬಿಡಿ. ಅದೇ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿ. ಕೃಷಿಕರನ್ನು ಮಾನಸಿಕವಾಗಿ ಬೆಂಬಲಿಸಬೇಕು ಎಂದು ಗ್ರಾಮದ ರೈತ ಮುಖಂಡ ಡಾ.ಜಿ.ಬೈರೇಗೌಡ ವಿನಂತಿಸಿದರು.
ಬಳಗೆರೆ ಗ್ರಾಮಸ್ಥರಾದ ಬಿ.ಎಚ್.ರಾಜು, ‘ಕೈಗಾರಿಕೆಗಳು ಬಂದರೆ, ಈ ಭಾಗದ ಅರಣ್ಯ, ಕೆರೆ ಕುಂಟೆ, ಪರಿಸರ, ಜೀವವೈವಿದ್ಯಕ್ಕೆ ಹಾನಿಯಾಗುತ್ತದೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.