ADVERTISEMENT

ಸ್ಥಿರಾಸ್ತಿ ಡಿಟಿಡಿ ನೋಂದಣಿ ಪುನರಾರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:38 IST
Last Updated 17 ಅಕ್ಟೋಬರ್ 2024, 15:38 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡೆಪಾಸಿಟ್‌ ಆಫ್ ಟೈಟಲ್‌ ಡೀಡ್‌) ನೋಂದಣಿಯನ್ನು ಮತ್ತೆ ಆರಂಭಿಸಬೇಕು ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಎಂ.ಆರ್. ವೆಂಕಟೇಶ್‌ ಆಗ್ರಹಪಡಿಸಿದರು.

ADVERTISEMENT

‘ಸಹಕಾರ ಬ್ಯಾಂಕ್‌, ಕ್ರೆಡಿಟ್ ಸೊಸೈಟಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಆಧಾರ ನೀಡುವ ಸ್ಥಿರಾಸ್ತಿ ದಾಖಲೆಗಳ ಡಿಟಿಡಿಯನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಇ-ಖಾತಾ ಕಡ್ಡಾಯ ಆಗಿದ್ದು, ಇ-ಖಾತಾ ನೀಡದಿದ್ದಲ್ಲಿ ಡಿಟಿಡಿ ನೋಂದಣಿ ಮಾಡುತ್ತಿಲ್ಲ’ ಎಂದಿದ್ದಾರೆ.

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳು ಇನ್ನೂ ಪೂರ್ಣ ಇ-ಖಾತಾ ಆಗಿಲ್ಲದಿರುವುದರಿಂದ ಬ್ಯಾಂಕ್‌ ಮತ್ತು ಸೊಸೈಟಿಗಳಲ್ಲಿ ಮಂಜೂರಾದ ಸಾಲಗಳನ್ನು ಸಕಾಲದಲ್ಲಿ ಬ್ಯಾಂಕಿನ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತಿಲ್ಲ. ಪಟ್ಟಣ ಸಹಕಾರ ಬ್ಯಾಂಕ್‌ಗಳ ನಿತ್ಯದ ಚಟುವಟಿಕೆಗಳು ತುಂಬಾ ಕುಂಠಿತವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಬ್ಯಾಂಕ್‌ ಸಾಲ ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಡಿಟಿಡಿ ನೋಂದಣಿಗೆ ಯಾವುದೇ ಅಡಚಣೆಯಾಗದಂತೆ ಸರ್ಕಾರ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದೂ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.