ADVERTISEMENT

ಭ್ರಷ್ಟ ಆರೋಗ್ಯ ಅಧಿಕಾರಿಗಳ ಅಮಾನತಿಗೆ ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:33 IST
Last Updated 24 ಅಕ್ಟೋಬರ್ 2024, 16:33 IST
ಆಮ್‌ ಆದ್ಮಿ ಪಕ್ಷ 
ಆಮ್‌ ಆದ್ಮಿ ಪಕ್ಷ    

ಬೆಂಗಳೂರು: ನಗರದ ನೂರಾರು ಅಮಾಯಕ ವ್ಯಾಪಾರಸ್ಥರ ಬಳಿ ಅಕ್ರಮವಾಗಿ ಹಣ ವಸೂಲು ಮಾಡಲು ಮುಂದಾಗಿರುವ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಹಣ ವಸೂಲಿಗಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವ್ಯಾಪಾರಸ್ಥರಿಗೆ ಪದೇ ಪದೇ ಧಮಕಿ ಹಾಕುತ್ತಿದ್ದ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ವಲಯ ಆಯುಕ್ತೆ ಸ್ನೇಹಲ್ ರಾಯಮನೆ ಅವರಿಗೆ ದೂರು ನೀಡಲಾಯಿತು ಎಂದು ಎಎಪಿ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ತಿಳಿಸಿದ್ದಾರೆ.

‘ಕೆಲವು ಸಮಯದಿಂದ ಅಧಿಕಾರಿಗಳು ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತಿರುವವರಿಗೆ ನೆರವು ನೀಡುವ ಬದಲು ಹಫ್ತಾ ವಸೂಲಿಗೆ ಇಳಿದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ವ್ಯಾಪಾರಸ್ಥರ ನಿಯೋಗದಲ್ಲಿ ಎಎಪಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಮುಖಂಡ ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.