ಪೀಣ್ಯ ದಾಸರಹಳ್ಳಿ: ಕಾಂತರಾಜು ಆಯೋಗದ ಅಪೂರ್ಣ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ತಿರಸ್ಕರಿಸಬೇಕು ಎಂದು ಒಕ್ಕಲಿಗರ ಕ್ರಿಯಾ ಸಮಿತಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.
ಕಾಂತರಾಜು ಆಯೋಗದ ಅಪೂರ್ಣ ಜಾತಿ ಗಣತಿ ವರದಿಯಾಗಿದ್ದು, ಇದರಲ್ಲಿ ಒಕ್ಕಲಿಗರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ತೋರಿಸಲಾಗಿದೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದಕ್ಕಾಗಿ ನೈಜವಾದ ನಿಖರವಾದ ಜಾತಿಗಣತಿ ನಡೆಸಬೇಕು ಎಂದು ಸಮಿತಿಯ ಅಧ್ಯಕ್ಷ ಕೆ.ಜಿ. ಕುಮಾರ್ ತಿಳಿಸಿದರು.
ವರದಿ ತಿರಸ್ಕರಿಸಬೇಕೆಂದು ಇದೇ 28ರಂದು ಬೆಳಿಗ್ಗೆ 10.30ಕ್ಕೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಒಕ್ಕಲಿಗ ಮುಖಂಡರು, ಮಠಾಧೀಶರು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಯವರು ಸಾವಿರಾರು ಜನರು ಭಾಗವಹಿಸಿ ಒಕ್ಕಲಿಗರ ಶಕ್ತಿ ಪ್ರದರ್ಶಿಸಬೇಕು ಎಂದು ಅವರು ಕೋರಿದರು.
ಕೆ.ಎನ್. ಲಿಂಗೇಗೌಡ, ಗೋವಿಂದೇಗೌಡ ಎ.ಎಸ್, ವೇಣುಗೋಪಾಲ್ ಕೆ., ರಾಣಿ ಪ್ರತಾಪ್, ರೇಣುಕಮ್ಮ, ಯಶೋದ, ರುದ್ರೇಶ್, ಸಂತೋಷ್, ಕಡೆಮನೆ ಚಂದ್ರು, ಕೃಷ್ಣಪ್ರಸಾದ್, ಬೈರೇಗೌಡ, ಕೃಷ್ಣೇಗೌಡ, ರವಿ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.