ADVERTISEMENT

ಯುಜಿಸಿ ವೇತನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 18:47 IST
Last Updated 9 ಫೆಬ್ರುವರಿ 2019, 18:47 IST

ಬೆಂಗಳೂರು:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮದಂತೆ ವೇತನ ಮತ್ತು ಸೇವಾ ಭದ್ರತೆ ಒದಗಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್‌.ಡಿ.ಚಲವಾದಿ,‘ಅತಿಥಿಉಪನ್ಯಾಸಕರಿಗೆ ಸರ್ಕಾರ ತಿಂಗಳಿಗೆ ₹13,000 ಮತ್ತು ₹11,000 ಸಂಬಳನೀಡುತ್ತದೆ. ಇದನ್ನೂ ಸಕಾಲದಲ್ಲಿ ಕೊಡುತ್ತಿಲ್ಲ. ಯುಜಿಸಿ ಒಂದು ತರಗತಿಗೆ ₹ 1,500 ಕೊಡುವಂತೆ ಆದೇಶಿಸಿದೆ’ ಎಂದರು.

‘ಬೇಡಿಕೆ ಈಡೇರಿಕೆಗಾಗಿ ಇದೇ 18ರಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುತ್ತೇವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.