ADVERTISEMENT

ವೈದ್ಯರಿಗಾಗಿ ಅಲೆದಾಡಿದ ವೃದ್ಧೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 4:50 IST
Last Updated 23 ಮಾರ್ಚ್ 2020, 4:50 IST
ಸುಂದ್ರಿ
ಸುಂದ್ರಿ   

ಬೆಂಗಳೂರು: 'ಸರ್‌ ಬೆಳಿಗ್ಗೆಯಿಂದ ಜ್ವರ ಸಾರ್‌... ಇಲ್ಲಿ ನೋಡಿದ್ರೆ ಒಂದೂ ಕ್ಲಿನಿಕ್ಕೂ ಸಿಕ್ತಿಲ್ಲ. ಕೈಯಲ್ಲಿ ದುಡ್ಡೂ ಇಲ್ಲ. ಡಾಕ್ಟ್ರು ಸಿಕ್ತಾರ ಅಂತ ಹುಡುಕಿಕೊಂಡು ಅಲಿತಿದ್ದೀನಿ. ನಡೆಯೋಕೂ ತ್ರಾಣ ಇಲ್ಲ...'

ಜನತಾ ಕರ್ಫ್ಯೂ ವೇಳೆ ವೈದ್ಯರನ್ನು ಹುಡುಕಿಕೊಂಡು ಶ್ರೀರಾಂಪುರದಲ್ಲಿ ಭಾನುವಾರ ಅಲೆಯುತ್ತಿದ್ದ 70 ವರ್ಷದ ವೃದ್ಧೆ ಸುಂದ್ರಿ ಅವರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡಿದ್ದು ಹೀಗೆ.

‘ಬೆಳಿಗ್ಗೆ ಜ್ವರ ಇತ್ತು. ಮನೆ ಹತ್ತಿರದ ಕ್ಲಿನಿಕ್‌ ಮುಚ್ಚಿತ್ತು. ದೊಡ್ಡಾಸ್ಪತ್ರೆ ಹುಡುಕಿಕೊಂಡು ಹೋಗುತ್ತಿದ್ದೇನೆ. ನನ್ನ ಬಳಿ ದುಡ್ಡೂ ಇಲ್ಲ. ಯಾರ ಹತ್ರನಾದ್ರೂ ಕೇಳನಾ ಅಂದ್ರ ಜನರೂ ಓಡಾಡುತ್ತಿಲ್ಲ. ಏನು ಮಾಡೋದೋ ತೋಚುತ್ತಿಲ್ಲ’ ಎಂದು ತಮ್ಮ ಸಂಕಷ್ಟ ಹೇಳಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.