ADVERTISEMENT

ನಮ್ಮ ಮೆಟ್ರೊ ಹಸಿರು ಮಾರ್ಗ: ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 10:36 IST
Last Updated 3 ಅಕ್ಟೋಬರ್ 2023, 10:36 IST
<div class="paragraphs"><p>ಬೆಂಗಳೂರಿನ ರಾಜಾಜಿನಗರದ ಬಳಿ ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿಯನ್ನು ಸೋಮವಾರ ತೆರವುಗೊಳಿಸಲಾಯಿತು</p></div>

ಬೆಂಗಳೂರಿನ ರಾಜಾಜಿನಗರದ ಬಳಿ ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿಯನ್ನು ಸೋಮವಾರ ತೆರವುಗೊಳಿಸಲಾಯಿತು

   

ಪ್ರಜಾವಾಣಿ ಚಿತ್ರ– ಎಚ್.ಜಿ.ಪ್ರಶಾಂತ್

ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಹಳಿತಪ್ಪಿದ್ದ ರಸ್ತೆ ರೈಲು ವಾಹನ (ಆರ್‌ಆರ್‌ವಿ)ವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆರವು ಮಾಡಲಾಯಿತು.

ADVERTISEMENT

ಇನ್ನು ಒಂದು ತಾಸಿನಲ್ಲಿ ಹಸಿರು ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳುವ ನಿರೀಕ್ಷೆಯಿದೆ. ಹಳಿ ದುರಸ್ತಿಗೆ ತೆರಳುತ್ತಿದ್ದ ವೇಳೆ, ವಾಹನವು ಹಳಿ ತಪ್ಪಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಮ್ಮ ಮೆಟ್ರೊ ಪ್ರಯಾಣಿಕರು ಪರದಾಡಿದ್ದರು. ಯಶವಂತಪುರದಿಂದ ಮಂತ್ರಿ ಸ್ಕ್ವೇರ್‌ ವರೆಗೆ ಒಂದು ಮಾರ್ಗದಲ್ಲಿ ಮಾತ್ರ ಅರ್ಧ ಗಂಟೆಗೆ ಒಮ್ಮೆ ಮೆಟ್ರೊ ಸಂಚಾರವಿತ್ತು. ಇದರಿಂದ ನಿಗದಿತ ಸಮಯಕ್ಕೆ ಪ್ರಯಾಣಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದರು. ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದಿಂದ ಬಿಎಂಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿತ್ತು.

ಮೆಟ್ರೊ ರೈಲು ಮಾರ್ಗದಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ಈ ವಾಹನ ಬಳಸಲಾಗುತ್ತದೆ. ಸೋಮವಾರ ಮಧ್ಯರಾತ್ರಿ ರಾಜಾಜಿನಗರದ ಸಮೀಪ ಸಂಚರಿಸುತ್ತಿದ್ದಾಗ ಈ ವಾಹನ ಹಳಿತಪ್ಪಿ ಸಮಸ್ಯೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.