ADVERTISEMENT

ವಿನ್ಯಾಸ: ಐಐಎಸ್‌ಸಿಯಲ್ಲಿ ಸಂಶೋಧನಾ ಕೇಂದ್ರ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:34 IST
Last Updated 23 ಆಗಸ್ಟ್ 2019, 19:34 IST
ವಿನ್ಯಾಸ ಸಮಾವೇಶದಲ್ಲಿ ಡಾ.ಇ.ವಿ.ರಮಣ ರೆಡ್ಡಿ ಮಾತನಾಡಿದರು
ವಿನ್ಯಾಸ ಸಮಾವೇಶದಲ್ಲಿ ಡಾ.ಇ.ವಿ.ರಮಣ ರೆಡ್ಡಿ ಮಾತನಾಡಿದರು   

ಬೆಂಗಳೂರು: ವಿನ್ಯಾಸ ಕ್ಷೇತ್ರದಲ್ಲಿ ಹೊಸತನ ಮತ್ತು ನಿರಂತರ ಸಂಶೋಧನೆಯ ಫಲವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್‌ಸಿ) ಸಂಶೋಧನಾ ಕೇಂದ್ರವೊಂದನ್ನು (ಸಿಒಇ) ಸ್ಥಾಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ‘ನ್ಯಾಸ್ಕಾಂ ಡಿಸೈನ್‌ ಇಂಡಿಯಾ’ ವಿನ್ಯಾಸ ಸಮಾವೇಶದ 2ನೇ ದಿನವಾದ ಶುಕ್ರವಾರ ಮಾತನಾಡಿದ ಅವರು, ಹೊಸ ವಿನ್ಯಾಸದೊಂದಿಗೆ ಪರಿಸರಕ್ಕೆ ಪೂರಕವಾಗುವ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರ ಸಕ್ರಿಯವಾಗಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ’ ಎಂದರು.

‘2022ರಲ್ಲಿ ನಡೆಯುವ ವಿಶ್ವ ವಿನ್ಯಾಸ ಸ್ಪರ್ಧೆಯ ಅಂತಿಮ ಸುತ್ತಿಗೆ ಪ್ರವೇಶಿಸಿದ ನಗರಗಳಲ್ಲಿ ಬೆಂಗಳೂರು ಸಹ ಒಂದು. ಇದು ಹೆಮ್ಮೆಯ ಸಂಗತಿ. ಹೀಗಾಗಿ ವಿನ್ಯಾಸ ಕ್ಷೇತ್ರದಲ್ಲಿ ಆಗುವಂತಹ ಸಂಶೋಧನೆಗಳು, ಬದಲಾವಣೆಗಳ ಫಲವನ್ನು ಪಡೆಯಲು ಬೆಂಗಳೂರು ಮತ್ತು ರಾಜ್ಯದ ಇತರ ಪ್ರದೇಶಗಳೂ ಕಾತರದಿಂದಿವೆ. ಐಐಎಸ್‌ಸಿಯಲ್ಲಿ ಇಂತಹ ಒಂದು ಕೇಂದ್ರ ಸ್ಥಾಪನೆಗೊಂಡರೆ ಅದರ ಪ್ರಯೋಜನ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಸಿಗಲು ಸಾಧ್ಯ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.