ನೆಲಮಂಗಲ: ಪಟ್ಟಣದ ವಸ್ತ್ರಭಾರತ ಸಂಸ್ಥೆಯುವಿಶೇಷ ಧನ್ವಂತರಿ ಆಯುರ್ವೇದ ಮಾಸ್ಕ್‌ನ್ನು ತಯಾರಿಸಿದೆ. ಆಗಸ್ಟ್ 15 ರಂದು 10ಸಾವಿರ ಮಾಸ್ಕ್‌ಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
‘ಎರಡು ಮತ್ತು ಮೂರು ಪದರದ ಮಾಸ್ಕ್ ಇದಾಗಿದ್ದು, ಮೂಗಿನ ಬಳಿ ಆಯುರ್ವೇದ ಗಿಡಮೂಲಿಕೆಗಳ ಪೊಟ್ಟಣವನ್ನು ಇರಿಸಲಾಗಿದೆ. ಎಲ್ಲ ತರಹದ ಸೋಂಕು ತಗುಲುವುದನ್ನು ತಡೆಗಟ್ಟುವ, ಉಸಿರಾಟದ ಸಮಸ್ಯೆ, ಶೀತ, ಕೆಮ್ಮು, ನೆಗಡಿ, ಕಫ, ಅಲರ್ಜಿ ದೂರಮಾಡುವ ಗಿಡಮೂಲಿಕೆಗಳ ಪುಡಿಯ ಮಿಶ್ರಣ ಪೊಟ್ಟಣದಲ್ಲಿ ಇದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ಜೆ.ವಿನೋದ್‌ಕುಮಾರ್ ತಿಳಿಸಿದರು.
‘ಮಿಶ್ರಣದ ತೀವ್ರತೆ ಕಡಿಮೆಯಾದಂತೆ ಪೊಟ್ಟಣವನ್ನು ಬದಲಾಯಿಸಲು ಅನುಕೂಲ ಕಲ್ಪಿಸಲಾಗಿದೆ. ಮಾಸ್ಕ್‌ನ ಪೇಟೆಂಟ್ ಪಡೆಯಲು ಅರ್ಜಿ ಹಾಕಲಾಗಿದೆ. ಕರ್ನಾಟಕ ಮತ್ತು ಕೇರಳ ಮೂಲದ ಆಯುರ್ವೇದ ತಜ್ಞರ ಸಲಹೆ ಸೂಚನೆ ಪಡೆದು ಮಾಸ್ಕ್‌ನ್ನು ತಯಾರಿಸಲಾಗಿದೆ’ ಎಂದು ವಿವರಿಸಿದರು.
ಈ ಮಾಸ್ಕ್ ತಯಾರಿಕೆಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಮಾಹಿತಿಗೆ:ಮೊ:9886825741
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.