ಬೆಂಗಳೂರು: ಉಪವಾಸ ಇದ್ದವನಿಗೆ ಮಾತ್ರ ಹಸಿವು ಗೊತ್ತಾಗುತ್ತದೆ. ಹಸಿವು ಗೊತ್ತಾದವನಿಗೆ ಮಾತ್ರ ಊಟದ ರುಚಿ ಗೊತ್ತಾಗುತ್ತದೆ. ಆದ್ದರಿಂದ ಹಸಿವು ಸಂಸ್ಕಾರಯುತವಾದ ವಿಷಯ. ಇವತ್ತು ಸರ್ಕಾರ ಬಹಳ ದೊಡ್ಡ ಮನಸ್ಸು ಮಾಡಿ, ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಾಯಂಕಾಲ ತಂಗಳದ ಊಟ, ಶಾಲೆಯ ಅವಧಿಯಲ್ಲಿ ಎಲ್ಲರಿಗೂ ನಿದ್ರೆ, ಇಂಥ ವ್ಯವಸ್ಥೆಗಳನ್ನೆಲ್ಲ ಮಾಡುತ್ತಿದೆ. ಆದರೆ, ಭಾರತ ದೇಶದ ಸಂಶೋಧನೆ ಇದಲ್ಲ ಎಂದುವಿದ್ವಾನ್ ಉಮಾಕಾಂತ್ ಭಟ್ ಸರ್ಕಾರ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದರು.
ಉಪವಾಸ ಮತ್ತು ಜಾಗರಣೆ ಭಾರತೀಯರ ಪ್ರಯೋಗವಾಗಿದೆ. ಉಪವಾಸವನ್ನು ನಮಗೆ ಸಂಸ್ಕಾರವಾಗಿ ಕೊಟ್ಟಿದ್ದು ಯಾಕೆಂದರೆ, ಹಸಿವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಅದನ್ನು ನಮ್ಮ ವಶದಲ್ಲಿ ಇಟ್ಟುಕೊಳ್ಳಲು. ಹಾಗಾದಾಗ ಮಾತ್ರ ನಮಗೆ ಭೋಜನದ ರುಚಿ ಅರ್ಥವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.