ADVERTISEMENT

ಅಮಾನ್ಯಗೊಂಡ ಹಳೆ ನೋಟುಗಳ ವಿಲೇವಾರಿ: ಕೋರ್ಟ್‌ ಮೊರೆ ಹೋಗಲು ಮುಂದಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 15:58 IST
Last Updated 6 ಅಕ್ಟೋಬರ್ 2024, 15:58 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ₹ 5 ಕೋಟಿಗೂ ಅಧಿಕ ಮೌಲ್ಯದ ಅಮಾನ್ಯಗೊಂಡ ಹಳೆಯ ನೋಟುಗಳ ವಿಲೇವಾರಿ ಮಾಡಲು ನ್ಯಾಯಾಲಯದ ಮೊರೆ ಹೋಗಲು ನಗರ ಪೊಲೀಸರು ಮುಂದಾಗಿದ್ದಾರೆ.

₹500 ಹಾಗೂ ₹1000 ಮುಖಬೆಲೆಯ ₹5 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದರು. 2016ರಲ್ಲಿ ಕೇಂದ್ರ ಸರ್ಕಾರ ಈ ನೋಟುಗಳನ್ನು ಚಲಾವಣೆಯಿಂದ ಅಮಾನ್ಯಗೊಳಿಸಿತು. ಹಾಗಾಗಿ ಹಣವನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಪೊಲೀಸರ ಮುಂದೆ ಉದ್ಭವವಾಗಿದೆ.

ADVERTISEMENT

‘ಹಳೆಯ ನೋಟುಗಳ ವಿಲೇವಾರಿಗೆ ನ್ಯಾಯಾಲಯದ ಅನುಮತಿ ಕೇಳಲಾಗುವುದು. ಅನುಮತಿ ಪಡೆದ ಬಳಿಕ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಅನ್ವಯ ವಿಲೇವಾರಿ ಮಾಡಲಾಗುತ್ತದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.