ADVERTISEMENT

ಪೀಣ್ಯ ದಾಸರಹಳ್ಳಿ: ಪೌರಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಯುನೈಟೆಡ್ ವೇ ಬೆಂಗಳೂರು ವತಿಯಿಂದ ಪೌರಕಾರ್ಮಿಕರಿಗೆ ಸಾಮಗ್ರಿ ವಿತರಿಸಲಾಯಿತು
ಯುನೈಟೆಡ್ ವೇ ಬೆಂಗಳೂರು ವತಿಯಿಂದ ಪೌರಕಾರ್ಮಿಕರಿಗೆ ಸಾಮಗ್ರಿ ವಿತರಿಸಲಾಯಿತು   

ಪೀಣ್ಯ ದಾಸರಹಳ್ಳಿ: ಸಮೀಪದ ಬಾಗಲಗುಂಟೆಯ ಬಿಬಿಎಂಪಿ ಕಚೇರಿ ಅವರಣದಲ್ಲಿ ಯುನೈಟೆಡ್ ವೇ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸಿಎಸ್ಅರ್ ಅನುದಾನದಡಿಯಲ್ಲಿ ಪೌರಕಾರ್ಮಿಕರಿಗೆ ಪೊರಕೆ, ಕೈಗವಸು, ರಿಫ್ಲೆಕ್ಟರ್ ಜಾಕೆಟ್, ರೈನ್ ಕೋಟ್, ಕ್ಯಾಪ್, ಪ್ಲಾಸ್ಟಿಕ್ ಬಾಂಡ್ಲಿಗಳನ್ನು ವಿತರಿಸಲಾಯಿತು.

ಸಾಮಗ್ರಿ ವಿತರಿಸಿದ ಬಿಬಿಎಂಪಿ ದಾಸರಹಳ್ಳಿ ವಲಯ ಹೆಚ್ಚುವರಿ ಆಯುಕ್ತ ಬಾಲಶೇಖರ್ ಮಾತನಾಡಿ, ‘ಈ ಸಂಸ್ಥೆಯವರು ಇಂಗು ಗುಂಡಿ ಮಾಡುವುದು, ಸರ್ಕಾರಿ ಶಾಲೆಗಳಿಗೆ ಬಣ್ಣ ಹೊಡೆಯುವುದು, ಬಡ ಜನರಿಗೆ ಸಹಾಯ ನೀಡುವುದು ಮುಂತಾದ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ರವಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಹನುಮಂತ ನಾಯ್ಕ, ತೋಟಗಾರಿಕೆಯ ಶಿವಲಿಂಗೇಗೌಡ, ಘನತ್ಯಾಜ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಯೋಗೇಶ್, ಲೀಡ್ ಎನ್‌ವೈರ್ನ್‌ಮೆಂಟ್‌ ಪ್ರಾಜೆಕ್ಟ್‌ನ ಕೆ. ರಾಧಾಕೃಷ್ಣ, ಪ್ರದೀಪ್, ಯುನೈಟೆಡ್ ವೇ ಬೆಂಗಳೂರು ಉಪಾಧ್ಯಕ್ಷ ವೆಂಕಟ ಸುಧಾಕರ್ ಭಾಗವಹಿಸಿದ್ದರು.

ADVERTISEMENT
ಯುನೈಟೆಡ್ ವೇ ಬೆಂಗಳೂರು ವತಿಯಿಂದ ಪೌರಕಾರ್ಮಿಕರಿಗೆ ಕೊಡುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.