ADVERTISEMENT

ಕ್ಯಾನ್ಸರ್ ರೋಗಿಗೆ ವಿದ್ಯಾರ್ಥಿನಿ ಆಕರ ಕೋಶ ದಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:58 IST
Last Updated 15 ಡಿಸೆಂಬರ್ 2021, 4:58 IST

ಬೆಂಗಳೂರು: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ರಕ್ತದ ಆಕರ ಕೋಶಗಳನ್ನು ದಾನ ಮಾಡುವ ಮೂಲಕ ಅವರು ಚೇತರಿಸಿಕೊಳ್ಳಲು ನೆರವಾಗಿದ್ದಾರೆ.

ವಿದ್ಯಾರ್ಥಿನಿಸ್ಮಿತಾ ಅವರು ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್’ನಲ್ಲಿ ಹೆಸರು ನೋಂದಾಯಿಸಿದ್ದರು. 9 ತಿಂಗಳ ಬಳಿಕ ಅವರ ರಕ್ತದ ಆಕರಕೋಶರೋಗಿಯೊಬ್ಬರಿಗೆ ಹೊಂದಾಣಿಕೆಯಾಗಿದೆ.

‘ರಕ್ತದ ಆಕರ ಕೋಶ ದಾನದ ಬಗ್ಗೆ ಬಹುತೇಕರಿಗೆ ಮಾಹಿತಿ ಕೊರತೆಯಿದೆ. ದಾನ ಮಾಡಲು ನಾನು ನಿರ್ಧರಿಸಿದಾಗ ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು. ಪ್ರಕ್ರಿಯೆ ಬಗ್ಗೆ ವಿವರಿಸಿದ ಬಳಿಕ ಬೆಂಬಲಿಸಿದರು’ ಎಂದು ವಿದ್ಯಾರ್ಥಿನಿಸ್ಮಿತಾ ತಿಳಿಸಿದ್ದಾರೆ.

ADVERTISEMENT

‘ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಇದು ಅಗತ್ಯವಿರುವಂತಹ ರೋಗಿಗಳ ಕುಟುಂಬದಲ್ಲಿ ಹೊಂದಾಣಿಕೆಯಾಗಬಲ್ಲ ದಾನಿಗಳು ಸಿಗುವುದು ಕಷ್ಟ’ ಎಂದುಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍ ಹೇಳಿದ್ದಾರೆ.

‘ಶೇ 30 ರಷ್ಟು ರೋಗಿಗಳಿಗೆ ಮಾತ್ರ ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳ ರಕ್ತದ ಆಕರ ಕೋಶ ಹೊಂದಾಣಿಕೆಯಾಗುತ್ತದೆ. ಶೇ 70 ರಷ್ಟು ರೋಗಿಗಳಿಗೆ ರಕ್ತದ ಆಕರ ಕೋಶ ಹೊಂದಾಣಿಕೆಯಾಗುವ ದಾನಿಗಳನ್ನು ಹುಡುಕಬೇಕಾಗುತ್ತದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಅತ್ಯಗತ್ಯ’ ಎಂದು ‍ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.