ADVERTISEMENT

ಬಿಬಿಎಂಪಿಯಿಂದ ‘ಶ್ವಾನ ಮಹೋತ್ಸವ’ ಇಂದು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 19:29 IST
Last Updated 16 ಅಕ್ಟೋಬರ್ 2024, 19:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವತಿಯಿಂದ ಆಯೋಜಿಸಲಾಗಿರುವ ‘ಶ್ವಾನ ಮಹೋತ್ಸವ’ಕ್ಕೆ ಎಲ್ಲ ಎಂಟು ವಲಯಗಳಲ್ಲಿ ಗುರುವಾರ ಚಾಲನೆ ಸಿಗಲಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಮಹೋತ್ಸವಕ್ಕೆ ಅಗ್ರ ಚಾಲನೆ ನೀಡಲಾಗುತ್ತದೆ ಎಂದು ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ADVERTISEMENT

‘ಒನ್ ಹೆಲ್ತ್’ ಭಾಗವಾಗಿ ಮತ್ತು ಸಹಬಾಳ್ವೆ ಅಡಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, ಪೌರಕಾರ್ಮಿಕರು, ಹೋಟೆಲ್ ಮಾಲೀಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು ಮತ್ತು ಆಸಕ್ತ ನಾಗರಿಕರು ಸಂಘಟಿತರಾಗಿ ಸಮುದಾಯ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದನ್ನು ಆರಂಭಿಸುತ್ತಾರೆ ಎಂದಿದ್ದಾರೆ.

ಪಾಲಿಕೆಯು ನಾಯಿಗಳಿಗೆ ಮಸಾಲೆ, ಎಣ್ಣೆ ಸೇರಿದಂತೆ ನಾಯಿಗಳಲ್ಲಿ ರೋಷ ಹೆಚ್ಚಲು ಕಾರಣವಾಗುವ ಅಂಶಗಳಿಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸಲು ಆಯಾ ಪ್ರದೇಶಗಳಲ್ಲಿನ ಹೋಟೆಲ್‌ಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಶ್ವಾನ ಮಹೋತ್ಸವದ ಅಂಗವಾಗಿ ಬಿಬಿಎಂಪಿಯಿಂದ ಹಲವು ವಾರ್ಡ್‌ಗಳಲ್ಲಿ ನಾಯಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

ಸ್ಥಳಗಳು: ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್ ಚೌಕ, ಹಡ್ಸನ್ ವೃತ್ತ. ಸಾದಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ, ಹೂಡಿ. ಗುಬ್ಬಲಾಳ ಮುಖ್ಯರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಸಂತಪುರ, ಬಿಸಿಎಂಸಿ ಲೇಔಟ್, ಆರ್.ಆರ್. ನಗರ.  ಬಾಗಲಗುಂಟೆ, ಮಂಜುನಾಥ ನಗರ ಮುಖ್ಯರಸ್ತೆ. ಸಿದ್ದಾಪುರ ವಾರ್ಡ್, ಗುಟ್ಟೆಪಾಳ್ಯ. ಟೆಲಿಕಾಂ ಲೇಔಟ್, ಜಕ್ಕೂರು. ಗಾಯತ್ರಿ ನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.