ಬೆಂಗಳೂರು: ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಸಿಲಿಕಾನ್ ಸಿಟಿ ಕೆನಲ್ ಕ್ಲಬ್ ಹಾಗು ಬೆಂಗಳೂರು ಕೆನೈನ್ ಕ್ಲಬ್ ಆಯೋಜಿಸಿರುವ ಅಖಿಲ ಭಾರತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ನಾಯಿಗಳು ಗಮನ ಸೆಳೆದವು.
ಉತ್ತರ ಕರ್ನಾಟಕದ ಜನಪ್ರಿಯ ತಳಿ ಮುಧೋಳ, ವಿಶೇಷ ತಳಿಗಳಾದ ಅಕಿತಾ, ಮಾಲ್ಟೀಸ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಶೆಫರ್ಡ್, ಅಪಘಾನ್ ಹೌಂಡ್ , ಜರ್ಮನ್ ಶೆಫರ್ಡ್, ಡಾಬರ್‌ಮನ್, ಲ್ಯಾಬ್ರಡಾರ್ ರಿಟ್ರೀವರ್, ಗೋಲ್ಡನ್ ರಿಟ್ರೀವರ್, ಬಾಕ್ಸರ್, ಗ್ರೇಟ್‌ಡೇನ್, ಕಾಕರ್ ಸ್ಪೇನಿಯೆಲ್ ಮತ್ತಿತರ ತಳಿಯ ಶ್ವಾನಗಳು ಪಾಲ್ಗೊಂಡು ತಮ್ಮ ಸೌಂದರ್ಯ, ಬುದ್ದಿಮತ್ತೆಯನ್ನು ಪ್ರದರ್ಶಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.