ADVERTISEMENT

ನೆಲ ಮೂಲದ ನುಡಿಯೇ ಮಾತೃಭಾಷೆ: ಲೇಖಕ ಯೋಗೇಶ್ ಮಾಸ್ಟರ್

‘ಕನ್ನಡೋತ್ಸವ’ದಲ್ಲಿ ಲೇಖಕ ಯೋಗೇಶ್ ಮಾಸ್ಟರ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 14:39 IST
Last Updated 10 ನವೆಂಬರ್ 2024, 14:39 IST
ಕೆಂಗೇರಿ ಉಪನಗರ ಸಂಘಟನಾ ಸಮಿತಿ, ಸಮಾನ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡೋತ್ಸವ-2024 ಕಾರ್ಯಕ್ರಮದಲ್ಲಿ ರಾಜೇಶ್ವರಿ ನಾಟ್ಯಾಲಯ ಕಲಾತಂಡದ ಸದಸ್ಯರು ಕಾಂತಾರ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.
ಕೆಂಗೇರಿ ಉಪನಗರ ಸಂಘಟನಾ ಸಮಿತಿ, ಸಮಾನ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡೋತ್ಸವ-2024 ಕಾರ್ಯಕ್ರಮದಲ್ಲಿ ರಾಜೇಶ್ವರಿ ನಾಟ್ಯಾಲಯ ಕಲಾತಂಡದ ಸದಸ್ಯರು ಕಾಂತಾರ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.   

ಕೆಂಗೇರಿ: ‘ತಾಯಿಯಾಡುವ ಭಾಷೆ ಮಾತೃಭಾಷೆಯಲ್ಲ. ಯಾವ ಭಾಷೆ ನಿರ್ದಿಷ್ಟ ನೆಲದ ಮೂಲ ನುಡಿಯಾಗಿರುವುದೋ ಅದೇ ನಿಜವಾದ ಮಾತೃಭಾಷೆ‘ ಎಂದು ಲೇಖಕ ಯೋಗೇಶ್ ಮಾಸ್ಟರ್ ಹೇಳಿದರು.

ಕೆಂಗೇರಿ ಉಪನಗರ ಸಂಘಟನಾ ಸಮಿತಿ, ಸಮಾನ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡೋತ್ಸವ-2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆಯ ವಿಷಯದಲ್ಲಿ ಶ್ರೇಷ್ಠತೆಯ ವ್ಯಸನಕ್ಕೆ ಬೀಳಬಾರದು. ಮಾತೃಭಾಷೆಯನ್ನು ಬಳಸುವ ಮೂಲಕ ಭಾಷೆಯನ್ನು ಸಮೃದ್ದಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ಅನ್ಯ ಭಾಷಿಕರು, ಅನ್ಯ ರಾಜ್ಯದವರಿಗೆ ಕನ್ನಡ ಕಲಿಸಲು ಇರುವ ಸಾತ್ವಿಕ ಸಾಧ್ಯತೆಗಳ ಬಗ್ಗೆ ಗಮನ ನೀಡಬೇಕು ಎಂದರು.

‘ಕನ್ನಡ ಕಾರ್ಯಕ್ರಮ ಆಯೋಜಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕನ್ನಡಪರ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬೇಕು‘ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಾಕೀತು ಮಾಡಿದರು. ಕಾರ್ಯಕ್ರಮದ ನಿಮಿತ್ತ ಸ್ಥಳೀಯ ಪ್ರತಿಭೆಗಳಿಗೆ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ನಟ ಕಿಶೋರ್ ಮಾತನಾಡಿ, ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸ್ಥಳೀಯ ಭಾಷೆ ಅತ್ಯಂತ ಅಗತ್ಯ. ಹಾಗಾಗಿ ಇತರ ಭಾಷೆಗಳನ್ನು ಪ್ರೀತಿಸುತ್ತಾ ನೆಲದ ಭಾಷೆಯನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಅಮೋಘವರ್ಷ ಮಾತನಾಡಿದರು. ಇದೇ ವೇಳೆ ವಿದ್ವಾನ್ ವಿಜಯಲಕ್ಷ್ಮಿ, ಖ್ಯಾತ ಉದ್ಯಮಿ ರಂಗಸ್ವಾಮಿ, ದಾನಿ ಮೇರಿಯಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ಗಾಯಕ ಹಾಗೂ ಸರ್ಕಾರಿ ಅಧಿಕಾರಿ ರವಿಶೇಖರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೈಕುಮಾರ್, ಧರ್ಮಸೇನಾ, ಪ್ರಶಾಂತ್ ಅಗೇರ, ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.