ADVERTISEMENT

ನಿಜಲಿಂಗಪ್ಪ ಅವರಿಂದ ಆಹಾರದ ಮಹತ್ವ ತಿಳಿದ; ಆಹಾರ ವ್ಯರ್ಥ ಮಾಡಬೇಡಿ: ಸಿಂಧ್ಯಾ ಮನವಿ

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕರ್ನಾಟಕದ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 2:44 IST
Last Updated 20 ಸೆಪ್ಟೆಂಬರ್ 2021, 2:44 IST
ಪಿ.ಜಿ.ಆರ್. ಸಿಂಧ್ಯಾ
ಪಿ.ಜಿ.ಆರ್. ಸಿಂಧ್ಯಾ   

ಬೆಂಗಳೂರು: ‘ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನು ಮನೆಯ ಮಟ್ಟದಿಂದಲೇ ತಡೆಯಬೇಕು. 1978ರಲ್ಲಿಎಸ್. ನಿಜಲಿಂಗಪ್ಪ ಅವರಿಂದ ಆಹಾರದ ಮಹತ್ವ ತಿಳಿದ ನಾನು, ಊಟಕ್ಕೆ ಉಪ್ಪಿನ ಕಾಯಿಯನ್ನೂ ಹಾಕಿಸಿಕೊಳ್ಳುತ್ತಿಲ್ಲ’ ಎಂದುಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ತಿಳಿಸಿದರು.

ಅವರ 73ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಭಾನುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಭವಿಷ್ಯಕ್ಕಾಗಿ ಆಹಾರದ ಕಾರ್ಯಕ್ರಮ’ ಎಂಬ ವಿಷಯದ ಮೇಲೆ ಮಾತನಾಡಿದರು.‘ದೇಶದಲ್ಲಿ ವರ್ಷಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಹಾರ ಪದಾರ್ಥವನ್ನು ವ್ಯರ್ಥ ಮಾಡಲಾಗುತ್ತಿದೆ. ಇದರಲ್ಲಿ ಶೇ 61 ರಷ್ಟು ಆಹಾರ ಪದಾರ್ಥಗಳು ಮನೆಯ ಮಟ್ಟದಲ್ಲಿಯೇ ನಿರುಪಯುಕ್ತವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಿಜಲಿಂಗಪ್ಪ ಅವರ ಜೊತೆಗೆ ಹಿಂದೊಮ್ಮೆ ಊಟ ಮಾಡುತ್ತಿರುವಾಗ ಆಹಾರವನ್ನು ವ್ಯರ್ಥ ಮಾಡಿದೆ. ಅದನ್ನು ಗಮನಿಸಿದ ಅವರು, ಅನ್ನದ ಮಹತ್ವದ ಬಗ್ಗೆ ತಿಳಿಸಿದರು.ಅಂದಿನಿಂದ ನಾನು ಒಂದು ಅಗಳು ಅನ್ನವನ್ನೂ ವ್ಯರ್ಥ ಮಾಡುತ್ತಿಲ್ಲ.ವಿವಿಧ ದೇಶಗಳಲ್ಲಿ ಆಹಾರ ವ್ಯರ್ಥ ತಡೆಗೆ ಏನೆಲ್ಲ ಕ್ರಮಕೈಗೊಂಡಿದ್ದಾರೆ ಎನ್ನುವುದರ ಬಗ್ಗೆಯೂ ಅಧ್ಯಯನವನ್ನು ಮಾಡಿದ್ದು, ಆಹಾರವನ್ನು ವ್ಯರ್ಥ ಮಾಡದಂತೆಸ್ಕೌಟ್ಸ್ ಗೈಡ್ಸ್ ಅವರ ಸಹಕಾರದಿಂದ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ADVERTISEMENT

2025ರಲ್ಲಿಜಾಂಬೂರಿ: ‘ಇಲ್ಲಿಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಜಾಂಬೂರಿ ಮಾಡಬೇಕು ಎಂಬ ಕೂಗು ಇದೆ. ಇದಕ್ಕೆ ಕನಿಷ್ಠ ₹ 100 ಕೋಟಿ ಬೇಕಾಗುತ್ತದೆ. ಕೇಂದ್ರ ಸರ್ಕಾರದ ಪ್ರಮುಖರ ಜೊತೆಗೆ ಈ ಬಗ್ಗೆ ಮಾತನಾಡುತ್ತೇನೆ.2025ರಲ್ಲಿ ಜಾಂಬೂರಿ ಮಾಡುವ ವಿಶ್ವಾಸವಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.