ಬೆಂಗಳೂರು: ಬುಡಕಟ್ಟು ಜನರಿಗೆ ಸುಧಾರಣೆಯ ದಾರಿ ತೋರಿದರೆ ಅವರು ಅದೇ ದಾರಿಯಲ್ಲಿ ಸಾಗುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ಹೇಳಿದರು.
ರಾಜಭವನದಲ್ಲಿ ಸೋಮವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 43 ಲಕ್ಷ ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ. ನೈಜ ದುರ್ಬಲ ಬುಡಕಟ್ಟು
ಗಳೆಂದು ಗುರುತಿಸ ಲಾಗಿರುವ ಜೇನುಕುರುಬರು ಹಾಗೂ ಕೊರಗ ಸಮುದಾಯಗಳ ಜನಸಂಖ್ಯೆ ಸುಮಾರು 50 ಸಾವಿರದಷ್ಟಿದೆ. ರಾಜ್ಯದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ
ಆಶ್ರಮ ಶಾಲೆಗಳಲ್ಲಿ ನೈಜ ದುರ್ಬಲರಿಗಾಗಿ ವಿಶೇಷ ಸ್ಥಾನ, ಗಮನ ನೀಡಬೇಕು. ಶಿಕ್ಷಣಕ್ಕೆ ಪ್ರೋತ್ಸಾಹಿಸ
ಬೇಕು ಎಂದರು.
ಬುಡಕಟ್ಟು ಜನ ಮುಕ್ತವಾಗಿ ಮಾತನಾಡಲು ಹಿಂಜರಿದಾಗ ರಾಷ್ಟ್ರಪತಿ, ಜನರ ಆಸನಗಳ ಬಳಿ ತೆರಳಿ ಆಪ್ತವಾಗಿ ಮಾತನಾಡಿಸಿದರು. ಅವರಿಗೆ ಮನೆ ಇದೆಯೇ, ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆಯೇ, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ, ಅರಣ್ಯಭೂಮಿಯಲ್ಲಿ ವಾಸವಾಗಿ ರುವವರು ಯಾರಿದ್ದೀರಿ ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಅವರ ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಲು ಪ್ರೋತ್ಸಾಹಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಚಿವ ಬಿ.ನಾಗೇಂದ್ರ, ಪ್ರಾಧ್ಯಾಪಕಿ ಡಾ.ಸವಿತಾ, ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.