ಬೆಂಗಳೂರು; ಡ್ರಗ್ಸ್ ದಂಧೆ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಎದುರು ವಿಚಾರಣೆಗಾಗಿ ಸೋಮವಾರ ಬೆಳಿಗ್ಗೆ ಹಾಜರಾಗುವುದಾಗಿ ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.
ಸಿಸಿಬಿ ನೀಡಿರುವ ನೋಟಿಸ್ ಉಲ್ಲೇಖಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಗಿಣಿ, 'ನನ್ನ ವಕೀಲರು ಸಿಸಿಬಿ ಪೊಲೀಸರ ಎದುರು ಹಾಜರಾಗಲಿದ್ದಾರೆ.
ಸಮಯದ ಅಭಾವದಿಂದ ಸಿಸಿಬಿ ಕಚೇರಿಗೆ ಹಾಜರಾಗಲು ಸಾಧ್ಯ ಆಗ್ತಿಲ್ಲ. ನನ್ನ ಪರವಾಗಿ ವಕೀಲರು ಸಿಸಿಬಿ ಕಚೇರಿಗೆ ಬಂದಿದ್ದಾರೆ. ನಾನು ಸೋಮವಾರ ಬೆಳಿಗ್ಗೆ ಕಚೇರಿಗೆ ಬಂದು ಹೇಳಿಕೆ ನೀಡುತ್ತೇನೆ' ಎಂದೂ ರಾಗಿಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.