ADVERTISEMENT

ವಿದ್ಯಾರ್ಥಿ ಮಾರ್ಷಲ್ ನಗರದಾದ್ಯಂತ ವಿಸ್ತರಣೆ: ಪೊಲೀಸ್ ಕಮಿಷನರ್ ದಯಾನಂದ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 15:43 IST
Last Updated 12 ಮಾರ್ಚ್ 2024, 15:43 IST
<div class="paragraphs"><p> ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ (ಮಧ್ಯದಲ್ಲಿ)</p></div>

ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ (ಮಧ್ಯದಲ್ಲಿ)

   

ಬೆಂಗಳೂರು: ‘ಶಾಲೆ–ಕಾಲೇಜು ಬಳಿ ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ತಡೆಯುವ ಉದ್ದೇಶ ಪ್ರಾಯೋಗಿಕವಾಗಿ ರೂಪಿಸಿರುವ ‘ವಿದ್ಯಾರ್ಥಿ ಮಾರ್ಷಲ್’ ಪರಿಕಲ್ಪನೆಯನ್ನು ನಗರದಾದ್ಯಂತ ವಿಸ್ತರಿಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ 24 ಕಾಲೇಜುಗಳಲ್ಲಿ ವಿದ್ಯಾರ್ಥಿ ಮಾರ್ಷಲ್‌ಗಳು ಇದ್ದಾರೆ. ಮಾರ್ಚ್ ಅಂತ್ಯಕ್ಕೆ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಾರ್ಷಲ್‌ ನಿಯೋಜಿಸಲಾಗುವುದು’ ಎಂದರು.

ADVERTISEMENT

‘ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳ ವಿರುದ್ಧ ವಿದ್ಯಾರ್ಥಿ ಮಾರ್ಷಲ್‌ಗಳು, ಶಾಲೆ–ಕಾಲೇಜಿನ ಒಳಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಕ್ರಮ ಮಾರಾಟದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಡ್ರಗ್ಸ್ ಮಾರಾಟ ತಡೆಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ವಿದ್ಯಾರ್ಥಿ ಮಾರ್ಷಲ್‌ಗಳಿಗೆ ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲ ತರಬೇತಿ ನೀಡಲಾಗುತ್ತಿದೆ. ಪೊಲೀಸರ ಕೆಲಸಕ್ಕೂ ವಿದ್ಯಾರ್ಥಿ ಮಾರ್ಷಲ್‌ಗಳು ನೆರವಾಗಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.